ADVERTISEMENT

2032ರ ವೇಳೆಗೆ ಹೆಚ್ಚುವರಿ 13,800 ಮೆಗಾವಾಟ್‌ ಅಣುವಿದ್ಯುತ್ ಉತ್ಪಾದನೆ: NPCIL

ಪಿಟಿಐ
Published 25 ಫೆಬ್ರುವರಿ 2024, 14:36 IST
Last Updated 25 ಫೆಬ್ರುವರಿ 2024, 14:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಲ್ಲಿ 2032ರ ಸಾಲಿನ ವೇಳೆಗೆ ಹೊಸದಾಗಿ 18 ಅಣು ವಿದ್ಯುತ್‌ ಸ್ಥಾವರವನ್ನು ಸ್ಥಾಪಿಸಲು ಉದ್ದೇಶಿಸಿದ್ದು, ಈ ಮೂಲಕ ಹೆಚ್ಚುವರಿಯಾಗಿ 13,800 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸುವ ಗುರಿ ಹೊಂದಲಾಗಿದೆ.

ಹೆಚ್ಚುವರಿ ಅಣುವಿದ್ಯುತ್ ಸ್ಥಾವರಗಳ ಸ್ಥಾಪನೆಯೊಂದಿಗೆ ಒಟ್ಟು ಅಣುವಿದ್ಯುತ್‌ ಉತ್ಪಾದನಾ ಸಾಮರ್ಥ್ಯವು 2031–32ರ ವೇಳೆಗೆ 22,480 ಮೆಗಾವಾಟ್‌ಗೆ ಏರಲಿದೆ ಎಂದು ಭಾರತೀಯ ಅಣುವಿದ್ಯುತ್‌ ನಿಗಮವು (ಎನ್‌ಪಿಸಿಐಎಲ್‌) ಪ್ರಕಟಿಸಿದೆ.

ದೇಶೀಯವಾಗಿ ನಿರ್ಮಿಸಲಾದ ಒಟ್ಟು 700 ಮೆಗಾವಾಟ್‌ ಸಾಮರ್ಥ್ಯದ ಅಣುವಿದ್ಯುತ್ ರಿಯಾಕ್ಟರ್‌ಗಳನ್ನು ಗುಜರಾತ್‌ನ ಕಾಕರ‍ಪಾರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವಾರ ಉದ್ಘಾಟಿಸಿದ ಸಂದರ್ಭದಲ್ಲಿ ಈ ಮಾಹಿತಿ ಹಂಚಿಕೊಳ್ಳಲಾಗಿದೆ.

ADVERTISEMENT

ಸದ್ಯ, ಎನ್‌ಪಿಸಿಐಎಲ್‌ 24 ಸ್ಥಾವರಗಳನ್ನು ನಿರ್ವಹಣೆ ಮಾಡುತ್ತಿದ್ದು, ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯ 8,180 ಮೆಗಾವಾಟ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.