ನವದೆಹಲಿ: ತನ್ನ ರಕ್ಷಣಾ ವ್ಯವಸ್ಥೆಯಲ್ಲಿ ಸಹಕಾರ ಸಂಬಂಧವನ್ನು ವಿಸ್ತರಿಸಿಕೊಳ್ಳಲು ಭಾರತದ ನೌಕಾಪಡೆಯು, ಆಫ್ರಿಕಾದ ಹಲವು ರಾಷ್ಟ್ರಗಳೊಂದಿಗೆ ಮುಂದಿನ ತಿಂಗಳು ಜಂಟಿ ಸಮರಾಭ್ಯಾಸ ನಡೆಸಲಿದೆ.
ಭಾರತೀಯ ನೌಕಾಪಡೆ ಹಾಗೂ ತಾಂಜಾನಿಯಾ ಭದ್ರತಾ ಪಡೆ ಜಂಟಿಯಾಗಿ ‘ಎಐಕೆಇವೈಎಮ್‌ಇ’ (ಆಫ್ರಿಕಾ– ಭಾರತ ಕಡಲತೀರದ ಒಪ್ಪಂದ) ಸಮರಾಭ್ಯಾಸವನ್ನು ಆಯೋಜಿಸಲಿವೆ. ಏಪ್ರಿಲ್‌ನಲ್ಲಿ ತಾಂಜಾನಿಯಾದ ದಾರ್ ಎಸ್ ಸಲಾಮ್‌ದಲ್ಲಿ ನಡೆಯಲಿರುವ ಸಮರಾಭ್ಯಾಸವನ್ನು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಉದ್ಘಾಟಿಸಲಿದ್ದಾರೆ ಎಂದು ನೌಕಾಪಡೆಯ ಉಪ ಮುಖ್ಯಸ್ಥ ತರುಣ್ ಸೊಬ್ತಿ ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.