ADVERTISEMENT

6 ಜಲಾಂತರ್ಗಾಮಿ ನಿರ್ಮಾಣಕ್ಕೆ ಸಿದ್ಧತೆ

ಯೋಜನಾ ವೆಚ್ಚ ₹ 55,000 ಕೋಟಿ * ಭಾರತದ 2, ವಿದೇಶದ 5 ಕಂಪನಿ ಆಯ್ಕೆ

ಪಿಟಿಐ
Published 30 ಆಗಸ್ಟ್ 2020, 18:09 IST
Last Updated 30 ಆಗಸ್ಟ್ 2020, 18:09 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ:₹ 55,000 ಕೋಟಿ ವೆಚ್ಚದಲ್ಲಿ 6 ಜಲಾಂತರ್ಗಾಮಿಗಳ ನಿರ್ಮಾಣ ಮಾಡುವ ಮಹತ್ವಾಕಾಂಕ್ಷೆ ಯೋಜನೆಗೆ ಭಾರತ ಚಾಲನೆ ನೀಡಲಿದೆ. ಈ ಸಂಬಂಧ ನಿರ್ಮಾಣ ಸಂಸ್ಥೆಗಳ ನೇಮಕಕ್ಕಾಗಿ ಅಕ್ಟೋಬರ್‌ನಲ್ಲಿ ಹರಾಜು ಪ್ರಕ್ರಿಯೆ ಆರಂಭಿಸಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಭಾನುವಾರ ಹೇಳಿವೆ.

ಚೀನಾ ತನ್ನ ನೌಕಾಪಡೆ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುತ್ತಿದ್ದು, ಅದಕ್ಕೆ ತಕ್ಕಂತೆ ತನ್ನ ನೌಕಾಪಡೆಯ ಬಲವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಈ ಮಹತ್ವದ ಹೆಜ್ಜೆಯನ್ನಿರಿಸಿದೆ ಎಂದು ಇವೇ ಮೂಲಗಳು ಹೇಳಿವೆ. ಈ ಯೋಜನೆಗೆ ‘ಪಿ–75 ಐ’ ಎಂದು ಹೆಸರಿಡಲಾಗಿದೆ.

ಈ ಸಂಬಂಧ ರಕ್ಷಣಾ ಸಚಿವಾಲಯವು ಭಾರತದ ಎಲ್‌ ಆ್ಯಂಡ್‌ ಟಿ ಸಮೂಹ ಹಾಗೂ ಮಜಗಾಂವ್‌ ಡಾಕ್ಸ್‌ ಲಿ. (ಎಂಡಿಎಲ್‌) ಹಾಗೂ ವಿದೇಶದ ಐದು ಕಂಪನಿಗಳನ್ನು ಗುರುತಿಸಿದೆ. ಜರ್ಮನಿ ಮೂಲದ ಥೈಸೆನ್‌ಕ್ರುಪ್‌ ಮರೀನ್‌ ಸಿಸ್ಟಂಸ್‌, ಸ್ಪೇನ್‌ನ ನವನ್ಷಿಯಾ ಹಾಗೂ ಫ್ರಾನ್ಸ್‌ ಮೂಲದ ನಾವಲ್‌ ಗ್ರೂಪ್‌ಗಳು ಪ್ರಮುಖ ವಿದೇಶಿ ಕಂಪನಿಗಳಾಗಿವೆ.

ADVERTISEMENT

ವಿದೇಶಿ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು, ದೇಶೀಯವಾಗಿಯೇ ಜಲಾಂತರ್ಗಾಮಿಗಳನ್ನು ನಿರ್ಮಾಣ ಮಾಡುವುದು ಈ ಯೋಜನೆಯ ಉದ್ದೇಶ. ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುವುದರ ಮೇಲೆ ಇತ್ತೀಚೆಗೆ ನಿಷೇಧ ಹೇರಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.