ADVERTISEMENT

ಭಾರತ, ಬ್ರಿಟನ್‌ ನಡುವೆ ‌ಜ.6ರಿಂದ ವಿಮಾನ ಸಂಚಾರ ಸೇವೆ

ಪಿಟಿಐ
Published 2 ಜನವರಿ 2021, 11:11 IST
Last Updated 2 ಜನವರಿ 2021, 11:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ಭಾರತದಿಂದ ಬ್ರಿಟನ್‌ಗೆ ಇದೇ 6ರಿಂದ ವಿಮಾನಯಾನ ಸೇವೆ ಪುನರಾರಂಭವಾಗಲಿದೆ’ ಎಂದು ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್‌ ಸಿಂಗ್ ಪುರಿ ಶನಿವಾರ ಹೇಳಿದರು. ಆ ದೇಶದಿಂದ ವಿಮಾನಯಾನ ಸೇವೆಯು ಜನವರಿ 8ರ ನಂತರ ಪುನರಾರಂಭವಾಗಲಿದೆ ಎಂದು ತಿಳಿಸಿದರು.

ಭಾರತ ಮತ್ತು ಬ್ರಿಟನ್‌ನಿಂದ ತಲಾ 15 ವಿಮಾನಗಳು ಸಂಚಾರ ಸೇವೆ ಆರಂಭಿಸಲಿವೆ. ಈ ವ್ಯವಸ್ಥೆ ಜನವರಿ 23ರವರೆಗೂ ಚಾಲ್ತಿಯಲ್ಲಿ ಇರಲಿದ್ದು, ನಂತರ ಪರಿಸ್ಥಿತಿ ಅವಲೋಕಿಸಿ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.

ರೂಪಾಂತರಗೊಂಡ ಕೊರೊನಾ ವೈರಸ್‌ಬ್ರಿಟನ್‌ನಲ್ಲಿ ಕಾಣಿಸಿಕೊಂಡ ಹಿಂದೆಯೇ ಉಭಯ ದೇಶಗಳ ನಡುವಣ ವಿಮಾನಯಾನ ಸೇವೆಯನ್ನು ಭಾರತ ನಿರ್ಬಂಧಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.