ADVERTISEMENT

ಸೈಬರ್‌ ಅಪರಾಧ: ಅಮೆರಿಕ–ಭಾರತ ಒಪ್ಪಂದ

ಪಿಟಿಐ
Published 18 ಜನವರಿ 2025, 13:35 IST
Last Updated 18 ಜನವರಿ 2025, 13:35 IST
ಭಾರತ ಮತ್ತು ಅಮೆರಿಕ ರಾಷ್ಟ್ರಧ್ವಜ 
ಭಾರತ ಮತ್ತು ಅಮೆರಿಕ ರಾಷ್ಟ್ರಧ್ವಜ     

ನವದೆಹಲಿ: ‘ಸೈಬರ್ ಅಪರಾಧ ಗೂಢಚರ್ಯೆ ಮತ್ತು ಡಿಜಿಟಲ್‌ ವಿಧಿವಿಜ್ಞಾನ ಕುರಿತ ಸಹಕಾರ ಹಾಗೂ ತರಬೇತಿ ಕುರಿತಂತೆ ಅಮೆರಿಕ ಹಾಗೂ ಭಾರತ ಒಪ್ಪಂದ ಮಾಡಿಕೊಂಡಿವೆ’ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಶನಿವಾರ ಹೇಳಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಚುನಾಯಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಅಧಿಕಾರ ಹಸ್ತಾಂತರ ಮಾಡುವುದಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಈ ಒಪ್ಪಂದ ಮಾಡಿಕೊಳ್ಳಲಾಗಿದೆ.

ಭಾರತದ ರಾಯಭಾರಿ ವಿನಯ್‌ ಮೋಹನ್‌ ಕ್ವಾತ್ರಾ ಹಾಗೂ ಅಮೆರಿಕದ ಗೃಹ ಇಲಾಖೆಯ ಹಂಗಾಮಿ ಉಪ ಕಾರ್ಯದರ್ಶಿ ಕ್ರಿಷ್ಟಿ ಕ್ಯಾನಗಾಲೊ ಅವರು ಶುಕ್ರವಾರ ವಾಷಿಂಗ್ಟನ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.