ನವದೆಹಲಿ:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆಬ್ರುವರಿ 24 ಮತ್ತು 25ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ,ನಮ್ಮ ಆದರಣೀಯ ಅತಿಥಿಗಳಿಗೆ ನೆನಪಿಟ್ಟುಕೊಳ್ಳುವಂಥ ಸ್ವಾಗತವನ್ನುಭಾರತ ನೀಡಲಿದೆ. ಈ ಭೇಟಿ ತುಂಬಾ ವಿಶೇಷವಾಗಿದ್ದು ಭಾರತ ಅಮೆರಿಕ ನಡುವಿನ ಗೆಳೆತನವನ್ನು ಮತ್ತಷ್ಟು ದೃಢಗೊಳಿಸಲಿದೆ ಎಂದಿದ್ದಾರೆ.
ಪ್ರಜಾಪ್ರಭುತ್ವ ಮತ್ತು ಬಹುತ್ವದ ವಿಷಯದಲ್ಲಿ ಭಾರತ ಮತ್ತು ಅಮೆರಿಕ ಸಮಾನ ಬದ್ಧತೆಯನ್ನುಹೊಂದಿದೆ. ಹಲವಾರು ವಿಷಯಗಳಲ್ಲಿ ನಾವು ಪರಸ್ಪರ ಸಹಕಾರ ಹೊಂದಿದ್ದೇವೆ. ಈ ಎರಡು ದೇಶಗಳ ನಡುವಿನ ಸಂಬಂಧವು ದೇಶದ ಜನರಿಗೆ ಮಾತ್ರ ಅಲ್ಲ ಇಡೀ ಜಗತ್ತಿಗೆ ನಿಮಿತ್ತವಾಗಲಿದೆ ಎಂದು ಮೋದಿ ಟ್ವೀಟಿಸಿದ್ದಾರೆ.
ಇದನ್ನೂ ಓದಿ:ಕೇಮ್ ಚೊ ಟ್ರಂಪ್: ಗುಜರಾತಿಗೆ ಬರಲಿದ್ದಾರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.