ADVERTISEMENT

ವಿದೇಶಗಳಿಂದ ಶಸ್ತ್ರಾಸ್ತ್ರ ಖರೀದಿ ಸಾಧ್ಯತೆ ಇಲ್ಲ- ರಕ್ಷಣಾ ಸಚಿವಾಲಯ

ಪಿಟಿಐ
Published 30 ಮಾರ್ಚ್ 2022, 10:49 IST
Last Updated 30 ಮಾರ್ಚ್ 2022, 10:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಿದೇಶಿ ಮತ್ತು ದೇಶೀಯ ಕಂಪನಿಗಳ ಮಧ್ಯೆ ಭಾರತ ಸರ್ಕಾರ ತಾರತಮ್ಯ ಮಾಡುವುದಿಲ್ಲ. ಆದರೆ, ಭಾರತವು ರಕ್ಷಣಾ ಉಪಕರಣಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವ ಸಾಧ್ಯತೆಯಿಲ್ಲ ಎಂದು ರಕ್ಷಣಾ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸಂಜಯ್ ಜಾಜು ಅವರು ತಿಳಿಸಿದ್ದಾರೆ.

ಈ ಬಗ್ಗೆ ಬುಧವಾರ ಮಾತನಾಡಿದ ಅವರು, 'ಭಾರತದಲ್ಲೇ ಇರುವ ವಿದೇಶಿಮೂಲದ ಉತ್ಪಾದನಾ ಘಟಕಗಳು ಶಸ್ತ್ರಾಸ್ತ್ರಗಳನ್ನು ಉತ್ಪಾದಿಸುತ್ತಿವೆ.ಲಾಕ್‌ಹೀಡ್ ಮಾರ್ಟಿನ್ ಸೇರಿದಂತೆ ಜಾಗತಿಕ ಕಂಪನಿಗಳಲ್ಲಿ ನನಗೆ ಸ್ನೇಹಿತರಿದ್ದಾರೆ. ಕೇಂದ್ರ ಸರ್ಕಾರವು ವಿದೇಶಿ ಮೂಲದ ಶಸ್ತ್ರಾಸ್ತ್ರ ಕಂಪನಿಗಳು ಮತ್ತು ದೇಶೀಯ ಶಸ್ತ್ರಾಸ್ತ್ರ ಕಂಪನಿಗಳ ಮಧ್ಯೆ ತಾರತಮ್ಯ ಮಾಡದು. ನಮಗೆ, ನೀವೆಲ್ಲರೂ ಸಮಾನರು. ನಿಮ್ಮೆಲ್ಲರಿಗೂ ಸಮಾನ ಅವಕಾಶ ನೀಡುವ ನಿಟ್ಟಿನಲ್ಲಿ ನಾವು ನೀತಿಗಳನ್ನು ರೂಪಿಸಿದ್ದೇವೆ. ಆದರೆ, ಸದ್ಯ ವಿದೇಶಗಳಿಂದ ನಾವು ಆಮದು ಮಾಡಿಕೊಳ್ಳುವುದಿಲ್ಲ' ಎಂದು ಪುನರುಚ್ಚಿಸಿದರು.

ಕೇಂದ್ರ ಸರ್ಕಾರ ಈಗಾಗಲೇ ಬಯ್-ಗ್ಲೋಬಲ್ ಅಡಿ₹60,000 ಕೋಟಿ ಮೌಲ್ಯದ ಖರೀದಿ ಪ್ರಕ್ರಿಯೆಯನ್ನು ರದ್ದು ಮಾಡಿದೆ ಎಂದು ಹೇಳಿದರು.

ADVERTISEMENT

2017-2021ರ ಅವಧಿವರೆಗೆ ಭಾರತವು ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರಗಳ ಖರೀದಿ ದೇಶವಾಗಿದ್ದು, ಈ ಅವಧಿಯಲ್ಲಿ ಒಟ್ಟಾರೆ ಜಾಗತಿಕ ಆಮದು ಪೈಕಿ ಭಾರತದ ಪಾಲು ಶೇ 11ರಷ್ಟಿದೆ ಎಂದು ಸ್ಟಾಕ್‌ಹೋಮ್ ಮೂಲದ ಭದ್ರತೆಗೆ ಸಂಬಂಧಿಸಿದ ಚಿಂತಕರ ಚಾವಡಿ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.