ADVERTISEMENT

ದೇಶದಲ್ಲಿ ದತ್ತು ಸ್ವೀಕಾರ ಸಂಖ್ಯೆ ಕಡಿಮೆಯಾಗಿಲ್ಲ: ಮಕ್ಕಳ ಅಭಿವೃದ್ಧಿ ಸಚಿವಾಲಯ

ಪಿಟಿಐ
Published 22 ಜುಲೈ 2022, 14:37 IST
Last Updated 22 ಜುಲೈ 2022, 14:37 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಮಕ್ಕಳನ್ನು ದತ್ತು ಪಡೆದುಕೊಳ್ಳಲು ದೇಶದಲ್ಲಿ 28,663 ಮಂದಿ ಕಾಯುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಶುಕ್ರವಾರ ಹೇಳಿದೆ.

‘ದತ್ತು ಪಡೆದುಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆಯೇ’ ಎಂದು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ‘ದತ್ತು ಸ್ವೀಕಾರ ಸಂಖ್ಯೆ ಕಡಿಮೆಯಾಗಿಲ್ಲ’ ಎಂದರು.

‘ಮಕ್ಕಳ ದತ್ತು ಸಂಪನ್ಮೂಲ ಪ್ರಾಧಿಕಾರದಲ್ಲಿ 1,030 ವಿದೇಶಿ ಅರ್ಜಿದಾರರು (ಅನಿವಾಸಿ ಭಾರತೀಯರು ಮತ್ತು ಸಾಗರೋತ್ತರ ಭಾರತೀಯರು) ದತ್ತು ಸ್ವೀಕಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. 2021–22ರಲ್ಲಿ ದೇಶದಲ್ಲಿ 2,991 ದತ್ತು ಸ್ವೀಕಾರ ನಡೆದಿದೆ. ಭಾರತ ಮತ್ತು ಇತರ ದೇಶಗಳ ನಡುವೆ 414 ದತ್ತು ಸ್ವೀಕಾರ ನಡೆದಿದೆ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.