ADVERTISEMENT

ಉಗ್ರರ ದಮನಕ್ಕೆ ‘ನಿಖರ ದಾಳಿ’

ಪಿಟಿಐ
Published 20 ನವೆಂಬರ್ 2020, 1:40 IST
Last Updated 20 ನವೆಂಬರ್ 2020, 1:40 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ : ತೀವ್ರವಾದ ಚಳಿಗಾಲ ಆರಂಭಕ್ಕೆ ಮುನ್ನವೇ ಗರಿಷ್ಠ ಸಂಖ್ಯೆಯ ಉಗ್ರರನ್ನು ಭಾರತದೊಳಕ್ಕೆ ನುಸುಳಿಸಲು ಪಾಕಿಸ್ತಾನ ಸೇನೆಯು ಯತ್ನಿಸುತ್ತಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರು ನುಸುಳಲು ಸಜ್ಜಾಗಿ ನಿಂತಿರುವ ಶಿಬಿರಗಳ ಮೇಲೆ ಭಾರತದ ಸೇನೆಯು ‘ನಿಖರ ದಾಳಿ’ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಜಾಗತಿಕ ಮಟ್ಟದ ಭಯೋತ್ಪಾದನೆ ತಡೆ ಸಂಸ್ಥೆ ಎಫ್‌ಎಟಿಎಫ್‌ನ ಪರಿಶೀಲನೆಯಿಂದ ಪಾಕಿಸ್ತಾನ ತಪ್ಪಿಸಿಕೊಳ್ಳುತ್ತಿದೆ. ಅದೇ ಹೊತ್ತಿಗೆ, ಆ ದೇಶವು ಜಮ್ಮು ಮತ್ತು ಕಾಶ್ಮೀರದಲ್ಲಿ ಅಶಾಂತಿ ನಿರ್ಮಾಣಕ್ಕೆ ಕುಮ್ಮಕ್ಕು ಕೊಡುತ್ತಿದೆ ಎಂದು ಮೂಲಗಳು ಅಭಿಪ್ರಾಯಪಟ್ಟಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ಭಾರತದ ಸೇನೆಯು ಗುಪ್ತಚರ ಮಾಹಿತಿಯ ಆಧಾರದಲ್ಲಿ ಉಗ್ರರ ಶಿಬಿರಗಳನ್ನು ಗುರಿಯಾಗಿಸಿ ನಿಖರ ದಾಳಿಗಳನ್ನು ನಡೆಸುತ್ತಿದೆ. ಪಾಕಿಸ್ತಾನ ಮತ್ತು ಇತರ ದೇಶಗಳ ಉಗ್ರರನ್ನು ನಿಗ್ರಹಿಸುವುದಷ್ಟೇ ಈ ದಾಳಿಯ ಗುರಿ. ಇಂತಹ ದಾಳಿಯಲ್ಲಿ ಸೊತ್ತು ನಾಶದ ಪ್ರಮಾಣ ಕನಿಷ್ಠವಾಗಿರುತ್ತದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.