ADVERTISEMENT

ಬ್ರಿಟನ್‌ನ ಸೇನಾ ಮುಖ್ಯಸ್ಥರೊಂದಿಗೆ ಭಾರತೀಯ ಸೇನೆ ಮುಖ್ಯಸ್ಥ ನರವಣೆ ಚರ್ಚೆ

ಪಿಟಿಐ
Published 6 ಜುಲೈ 2021, 6:01 IST
Last Updated 6 ಜುಲೈ 2021, 6:01 IST
 ಬ್ರಿಟನ್‌ನ ಸೇನಾ ಮುಖ್ಯಸ್ಥ ಜನರಲ್‌ ಸರ್‌ ನಿಕೋಲಸ್‌ ಕಾರ್ಟರ್‌ ಅವರನ್ನು ಭೇಟಿಯಾದ ಸೇನಾ ಮುಖ್ಯಸ್ಥ ಜನರಲ್‌ ಎಂ.ಎಂ.ನರವಣೆ     -ವಿಟರ್‌ ಚಿತ್ರ
 ಬ್ರಿಟನ್‌ನ ಸೇನಾ ಮುಖ್ಯಸ್ಥ ಜನರಲ್‌ ಸರ್‌ ನಿಕೋಲಸ್‌ ಕಾರ್ಟರ್‌ ಅವರನ್ನು ಭೇಟಿಯಾದ ಸೇನಾ ಮುಖ್ಯಸ್ಥ ಜನರಲ್‌ ಎಂ.ಎಂ.ನರವಣೆ     -ವಿಟರ್‌ ಚಿತ್ರ   

ಲಂಡನ್‌: ಭಾರತೀಯ ಸೇನೆಯ ಮುಖ್ಯಸ್ಥ ಜನರಲ್‌ ಎಂ.ಎಂ.ನರವಣೆ ಅವರು ಬ್ರಿಟನ್‌ನ ಸೇನಾ ಮುಖ್ಯಸ್ಥ ಜನರಲ್‌ ಸರ್‌ ನಿಕೋಲಸ್‌ ಕಾರ್ಟರ್‌ ಅವರನ್ನು ಭೇಟಿಯಾಗಿ, ಉಭಯ ದೇಶಗಳ ನಡುವಿನ ರಕ್ಷಣಾ ಸಹಕಾರದ ಕುರಿತು ಚರ್ಚಿಸಿದರು’ ಎಂದು ಭಾರತೀಯ ಸೇನೆ ಟ್ವೀಟ್‌ ಮಾಡಿದೆ.

‘ಜನರಲ್‌ ನರವಣೆ ಅವರು ಸೋಮವಾರ (ಜುಲೈ 5) ಬ್ರಿಟನ್‌ಗೆ ಬಂದಿದ್ದಾರೆ’ ಎಂದು ಭಾರತೀಯ ಹೈಕಮಿಷನ್‌ ಹೇಳಿಕೆ ಬಿಡುಗಡೆ ಮಾಡಿದೆ.

ಯುರೋಪ್‌ ಪ್ರವಾಸದಲ್ಲಿರುವ ನರವಣೆ ಅವರು ಬ್ರಿಟನ್‌ನಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಅವರು ಬ್ರಿಟನ್‌ನ ರಕ್ಷಣಾ ಕಾರ್ಯದರ್ಶಿ ಬೆನ್‌ ವಾಲ್ಸೆ ಮತ್ತಿತರರನ್ನು ಭೇಟಿಯಾಗಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.