ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗುಲ್‌ಮಾರ್ಗ್ ಪ್ರದೇಶದ ಮಿಲಿಟರಿ ಕ್ಯಾಂಪ್ ಬಳಿ ತನ್ನದೇ ಸರ್ವಿಸ್ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಯೋಧನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯು ಭಾನುವಾರ ರಾತ್ರಿ ಜರುಗಿದೆ.
ಭಾರತೀಯ ಸೇನೆಯ 9ನೇ ರಾಜ್ ರೈಫಲ್ ಪಡೆಯಲ್ಲಿದ್ದ, ರಾಜಸ್ಥಾನ ಮೂಲದ ಲ್ಯಾನ್ಸ್ ನಾಯಕ್ ಬನ್ವರ್ ಲಾಲ್ ಸರನ್ ಅವರು ಗುಂಡು ಹಾರಿಸಿಕೊಂಡ ತಕ್ಷಣವೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದಿದ್ದಾರೆ.
ಮರಣೋತ್ತರ ಪರೀಕ್ಷೆಗಾಗಿ ಶವವನ್ನು ತಂಗ್‌ಮಾರ್ಗ್ ಉಪ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯಲಾಯಿತು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.