ADVERTISEMENT

ಶುಭಾಂಶು ಶುಕ್ಲಾ ಸಾಧನೆ ಶತಕೋಟಿ ಕನಸುಗಳಿಗೆ ಸ್ಫೂರ್ತಿ: ಪ್ರಧಾನಿ ಮೋದಿ

ಪಿಟಿಐ
Published 15 ಜುಲೈ 2025, 11:23 IST
Last Updated 15 ಜುಲೈ 2025, 11:23 IST
   

ನವದೆಹಲಿ: 18 ದಿನಗಳ ನಂತರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಮರಳಿರುವ ಗ್ರೂಪ್‌ ಕ್ಯಾಪ್ಟನ್‌ ಶುಭಾಂಶು ಶುಕ್ಲಾ ಅವರ ಸಾಧನೆಯನ್ನು ಪ್ರಧಾನಿ ನರೇಂದ್ರ ಶ್ಲಾಘಿಸಿದ್ದಾರೆ. ಶುಕ್ಲಾ ಅವರ ಸಮರ್ಪಣೆ, ಧೈರ್ಯ ಮತ್ತು ಸಾಧನೆ ಶತಕೋಟಿ ಕನಸುಗಳಿಗೆ ಸ್ಫೂರ್ತಿಯಾಗಿದೆ ಎಂದು ಬಣ್ಣಿಸಿದ್ದಾರೆ.

ಇದೇ ಜೂನ್‌ 25ರಂದು ಶುಕ್ಲಾ ಸೇರಿ ನಾಲ್ವರು ಗಗನಯಾತ್ರಿಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಪಯಣ ಬೆಳೆಸಿದ್ದರು. ಅಲ್ಲಿ ಅನೇಕ ಪ್ರಯೋಗಗಳನ್ನು ಕೈಗೊಂಡ ನಂತರ ಇಂದು ಭೂಮಿಗೆ ಮರಳಿದ್ದಾರೆ.

ಶುಕ್ಲಾ ಅವರಿಗೆ ಸ್ವಾಗತ ಕೋರಿ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಮೋದಿ, ‘ಇದು ಭಾರತದ ಮಹಾತ್ವಕಾಂಕ್ಷೆಯ ಮಾನವ ಸಹಿತ ‘ಗಗನಯಾನ’ ಯೋಜನೆಗೆ ಮತ್ತಷ್ಟು ಸ್ಫೂರ್ತಿ ತುಂಬಿದೆ’ ಎಂದಿದ್ದಾರೆ.

ADVERTISEMENT

ಗಗನಯಾನಿಗಳಾದ ಶುಕ್ಲಾ ಮತ್ತು ಇತರ ಮೂವರು ಇಂದು ಮಧ್ಯಾಹ್ನ 3.01ರ ಸುಮಾರಿಗೆ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೊದಲ್ಲಿ ಬಂದು ಇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.