ADVERTISEMENT

ಗಾಲ್ವನ್ ಕಣಿವೆ ಸಂಘರ್ಷ: ಭಾರತ–ಚೀನಾ ಸೇನಾ ಕಮಾಂಡರ್‌ಗಳ ಸಭೆ

ಏಜೆನ್ಸೀಸ್
Published 22 ಜೂನ್ 2020, 8:55 IST
Last Updated 22 ಜೂನ್ 2020, 8:55 IST
   

ನವದೆಹಲಿ:ಭಾರತ ಮತ್ತು ಚೀನಾ ನಡುವಿನ ಗಾಲ್ವನ್‌ ಕಣಿವೆ ಸಂಘರ್ಷಕ್ಕೆ ಸಂಬಂಧಿಸಿದಂತೆ ಸೇನಾ ಕಮಾಂಡರ್‌ಗಳ‌ ಮಟ್ಟದ ಸಭೆ ಪೂರ್ವ ಲಡಾಖ್‌ನಲ್ಲಿ ನಡೆದಿದೆ. ಕಳೆದ ಒಂದೂವರೆ ತಿಂಗಳಿನಿಂದ ಗಡಿಯಲ್ಲಿ ನಿರ್ಮಾಣವಾಗಿರುವ ಉದ್ವಿಗ್ನತೆಯನ್ನು ಶಾಂತಿಯುತವಾಗಿ ಕೊನೆಗಾಣಿಸುವ ಸಂಬಂಧ ಚರ್ಚಿಸಲಾಗಿದೆ.

‘ಸೇನಾ ಕಮಾಂಡರ್‌ಗಳ ಸಭೆಯನ್ನು ಮೊಲ್ಡೊದಲ್ಲಿ ಸೋಮವಾರ ಬೆಳಗ್ಗೆ 11.30ಕ್ಕೆ ನಿಗಡಿಪಡಿಸಲಾಗಿತ್ತು’ ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಡಿಯಲ್ಲಿ ನಿರ್ಮಾಣವಾಗಿರುವಬಿಕ್ಕಟ್ಟನ್ನು ಪಡಿಹರಿಸುವ ಸಲುವಾಗಿ,ಒಂದು ತಿಂಗಳ ಅವಧಿಯಲ್ಲಿ ಉಭಯ ಸೇನಾಪಡೆಗಳ ನಡೆಸಿದ ಎರಡನೇ ಉನ್ನತ ಮಟ್ಟದ ಸಭೆಯಾಗಿದೆ.

ADVERTISEMENT

ಜೂನ್‌ 6 ರ ಸಭೆಯೂ ಇಲ್ಲಿಯೇ ನಡೆದಿತ್ತು. ಆದಾಗ್ಯೂ, ಗಾಲ್ವಾನ್‌ ಕಣಿವೆಯಲ್ಲಿ ಹಿಂಸಾತ್ಮಕ ಸಂಘರ್ಷ ನಡೆದಿತ್ತು. ಇದು ಭಾರತ ಮತ್ತು ಚೀನಾ ಗಡಿಯಲ್ಲಿ 45 ವರ್ಷಗಳ ಬಳಿಕ ನಡೆದ ಹಿಂಸಾತ್ಮಕ ಸಂಘರ್ಷವಾಗಿದೆ. ಇದಾದ ಬಳಿಕ ಗಡಿಯಲ್ಲಿ ಪರಿಸ್ಥಿತಿ ಮತ್ತಷ್ಟು ಹಾಳಾಗಿದೆ.

ಗಾಲ್ವನ್‌ ಕಣಿವೆ ಸಂಘರ್ಷಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಪ್ರಧಾನಿ ನರೇಂದ್ರ ಮೋದಿ, ‘ಭಾರತ ಶಾಂತಿಯನ್ನು ಬಯಸುತ್ತದೆ. ಆದರೆ ಪ್ರಚೋದನೆ ನೀಡಿದರೆ, ತಕ್ಕ ಉತ್ತರ ನೀಡುವ ಸಾಮರ್ಥ್ಯವಿದೆ’ ಎಂದಿದ್ದರು.

ಸಂಘರ್ಷದ ವೇಳೆ ಭಾರತದ20 ಸೈನಿಕರು ಹುತಾತ್ಮರಾಗಿ, 76 ಮಂದಿ ಗಾಯಗೊಂಡಿದ್ದರು. ಮತ್ತು ಚೀನಾದ 43 ಸೈನಿಕರು ಮೃತಪಟ್ಟಿದ್ದರು. ಇದೇ ವೇಳೆ ಚೀನಾದ 43 ಸೈನಿಕರು ಮೃತಪಟ್ಟಿದ್ದಾರೆ ಎಂದುಕೇಂದ್ರ ಸಚಿವ ಹಾಗೂ ಸೇನೆಯ ಮಾಜಿ ಮುಖ್ಯಸ್ಥ ಜನರಲ್‌ ವಿ.ಕೆ. ಸಿಂಗ್‌ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.