ADVERTISEMENT

ಟೆಕ್ಸಾಸ್‌ನಲ್ಲಿ ಗುಂಡಿನ ದಾಳಿ: ತೆಲಂಗಾಣದ ಎಂಜಿನಿಯರ್‌ ಸಾವು

ಪಿಟಿಐ
Published 8 ಮೇ 2023, 19:31 IST
Last Updated 8 ಮೇ 2023, 19:31 IST
ಐಶ್ವರ್ಯಾ ತಾಟಿಕೊಂಡ
ಐಶ್ವರ್ಯಾ ತಾಟಿಕೊಂಡ   

ಹ್ಯೂಸ್ಟನ್‌: ಅಮೆರಿಕದ ಟೆಕ್ಸಾಸ್‌ನಲ್ಲಿ ಜನದಟ್ಟಣೆ ಇದ್ದ ಮಾಲ್‌ನಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟ 9 ಮಂದಿಯಲ್ಲಿ ಭಾರತೀಯ ಮೂಲದ ಎಂಜಿನಿಯರ್‌ ಒಬ್ಬರು ಸೇರಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ತೆಲಂಗಾಣದ ಗುಂಟೂರು ಜಿಲ್ಲೆಯ ಐಶ್ವರ್ಯಾ ತಾಟಿಕೊಂಡ ಮೃತಪಟ್ಟವರು. ಪರ್ಫೆಕ್ಟ್‌ ಜನರಲ್‌ ಕಾಂಟ್ರ್ಯಾಕ್ಟರ್ಸ್‌ ಎಲ್‌ಎಲ್‌ಸಿ ಕಂಪನಿಯಲ್ಲಿ ಪ್ರಾಜೆಕ್ಟ್‌ ಎಂಜಿನಿಯರ್‌ ಆಗಿ ಅವರು ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಟೆಕ್ಸಾಸ್‌ನ ಮೆಕ್‌ಕಿನ್ನಿ ನಗರದಲ್ಲಿ ನೆಲೆಸಿದ್ದರು.

ಐಶ್ವರ್ಯಾ ತನ್ನ ಸ್ನೇಹಿತನ ಜೊತೆ ಡಲ್ಲಾಸ್‌ನ ಅಲೆನ್ ಪ್ರೀಮಿಯಂ ಔಟ್‌ಲೆಟ್ಸ್ ಮಾಲ್‌ನಲ್ಲಿ ಶಾಪಿಂಗ್ ಮಾಡುತ್ತಿದ್ದಾಗ ಶನಿವಾರ ಮಧ್ಯಾಹ್ನ 3.30ರ ವೇಳೆಗೆ ಬಂದೂಕುಧಾರಿ ಮಾರಿಶಿಯೋ ಗಾರ್ಸಿಯಾ ನಡೆಸಿದ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ ಎಂದು ‘ನ್ಯೂಯಾರ್ಕ್‌ ಪೋಸ್ಟ್‌’ ಪತ್ರಿಕೆ ವರದಿ ಮಾಡಿದೆ. ಬಂದೂಕುಧಾರಿಯನ್ನು ಪೊಲೀಸರು ಹತ್ಯೆ ಮಾಡಿದ್ದಾರೆ.

ADVERTISEMENT

ಐಶ್ವರ್ಯಾ ಜತೆಗಿದ್ದ ಆಕೆಯ ಸ್ನೇಹಿತನ ಬಗ್ಗೆ ವಿವರ ತಿಳಿದುಬಂದಿಲ್ಲ. ಆತನಿಗೂ ಗುಂಟೇಟುಗಳು ತಗುಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಸ್ಥಿತಿ ಸ್ಥಿರವಾಗಿದೆ. ಐಶ್ವರ್ಯಾ ಶವವನ್ನು ಭಾರತಕ್ಕೆ ತರಲು ಅವರ ಕುಟುಂಬದವರು ಯೋಚಿಸಿರುವುದಾಗಿ ವರದಿಯಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.