ADVERTISEMENT

‘ದೇಸ್’, ‘ಬಿಂದಾಸ್‌’ ಸೇರಿ 800 ಶಬ್ದಗಳು ಆಕ್ಸ್‌ಫರ್ಡ್‌ ಡಿಕ್ಷನರಿಗೆ ಸೇರ್ಪಡೆ

ಭಾರತೀಯ ಇಂಗ್ಲಿಷಿನ ಉಚ್ಚಾರಣೆ ಮಾರ್ಗದರ್ಶಿ ಸಹಿತ ಸೇರ್ಪಡೆ

ಪಿಟಿಐ
Published 31 ಜನವರಿ 2023, 13:55 IST
Last Updated 31 ಜನವರಿ 2023, 13:55 IST
ಆಕ್ಸ್‌ಫರ್ಡ್ ಡಿಕ್ಷನರಿ
ಆಕ್ಸ್‌ಫರ್ಡ್ ಡಿಕ್ಷನರಿ   

ನವದೆಹಲಿ: ‘ದೇಸ್’ (ದೇಶ) ಹಾಗೂ ‘ಬಿಂದಾಸ್’ (ದಿಟ್ಟ) ಪದಗಳನ್ನು ಒಳಗೊಂಡಂತೆ ಭಾರತೀಯ ಇಂಗ್ಲಿಷ್‌ಗೆ ಸಂಬಂಧಿಸಿದ 800ಕ್ಕೂ ಹೆಚ್ಚಿನ ಪದಗಳನ್ನು ಉಚ್ಚಾರಣೆ ಸಹಿತ ಪ್ರತಿಲಿಪಿ ಹಾಗೂ ಆಡಿಯೊದೊಂದಿಗೆ ಆಕ್ಸ್‌ಫರ್ಡ್ ಇಂಗ್ಲಿಷ್ ಡಿಕ್ಷನರಿಯಲ್ಲಿ (ಒಇಡಿ) ಸೇರಿಸಲಾಗಿದೆ.

‘ಹೊಸದಾಗಿ ಸೇರ್ಪಡೆಗೊಂಡಿರುವ ಜಾಗತಿಕ ಇಂಗ್ಲಿಷ್ ಉಚ್ಚಾರಣೆಯ ಆಡಿಯೊ ದೇಶದಲ್ಲಿ ಭಾರತೀಯ ಇಂಗ್ಲಿಷ್ ಮಾತನಾಡುವವರ ನಡುವಿನ ದೊಡ್ಡ ಅಂತರವನ್ನು ತುಂಬಲಿದೆ’ ಎಂದು ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್ ಹೇಳಿದೆ.

ಆಕ್ಸ್‌ಫರ್ಡ್ ಡಿಕ್ಷನರಿಯಲ್ಲಿ ಇತರ ಭಾರತೀಯ ಪದಗಳಾದ ‘ದಿಯಾ’ (ಒಂದು ಕಪ್ ಆಕಾರದ ಎಣ್ಣೆ ದೀಪ. ಸಾಮಾನ್ಯವಾಗಿ ಜೇಡಿಮಣ್ಣಿನಿಂದ ಮಾಡಲಾಗಿರುವ ದೀಪವನ್ನು ದೀಪಾವಳಿ ಹಬ್ಬದ ಸಂದರ್ಭಗಳಲ್ಲಿ ಬಳಸಲಾಗುತ್ತದೆ), ‘ಬಚ್ಚಾ’ (ಮಗು, ಎಳೆಯ ಪ್ರಾಣಿ ಕೂಡಾ) ಮತ್ತು ಅಲ್ಮೆರಾ (ಬೀರು, ವಾರ್ಡ್‌ರೋಬ್ ಅಥವಾ ಶೇಖರಣಾ ಘಟಕ) ಅನ್ನೂ ಸೇರಿಸಲಾಗಿದೆ.

ADVERTISEMENT

‘ಬ್ರಿಟನ್‌ ಮತ್ತು ಅಮೆರಿಕ ಇಂಗ್ಲಿಷ್ ಹೊರತುಪಡಿಸಿ ಇಂಗ್ಲಿಷ್‌ನ ವಿವಿಧ ಉಚ್ಚಾರಣೆಗಳ ಕುರಿತಾಗಿ ನಮ್ಮ ಆಡಿಯೊವನ್ನು ವಿಸ್ತರಿಸುವ ಕೆಲಸ ಪ್ರಾರಂಭಿಸಿದಾಗಿನಿಂದ ಭಾರತೀಯ ಇಂಗ್ಲಿಷ್ ನಮ್ಮ ಮುಖ್ಯ ಆದ್ಯತೆಗಳಲ್ಲಿ ಒಂದಾಗಿತ್ತು. ಅಷ್ಟೇ ಅಲ್ಲ, ಇದು ಬಹುದೊಡ್ಡ ಸವಾಲಾಗಿತ್ತು’ ಎಂದು ಆಕ್ಸ್‌ಫರ್ಡ್ ಇಂಗ್ಲಿಷ್ ಡಿಕ್ಷನರಿಯ ಉಚ್ಚಾರಣೆ ವಿಭಾಗದ ಸಂಪಾದಕರಾದ ಡಾ. ಕ್ಯಾಥರಿನ್ ಸಾಂಗ್‌ಸ್ಟೆರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.