ADVERTISEMENT

ಅಮೆರಿಕದಲ್ಲಿ ಹೈದರಾಬಾದ್‌ ಮೂಲದ ವ್ಯಕ್ತಿಗೆ ಗುಂಡಿಟ್ಟು ಹತ್ಯೆ

ಫ್ಲೋರಿಡಾ

ಏಜೆನ್ಸೀಸ್
Published 21 ಫೆಬ್ರುವರಿ 2019, 5:32 IST
Last Updated 21 ಫೆಬ್ರುವರಿ 2019, 5:32 IST
   

ಹೈದರಾಬಾದ್‌: ಅಪರಿಚಿತ ವ್ಯಕ್ತಿಯೊಬ್ಬರ ಅಮೆರಿಕದ ಫ್ಲೋರಿಡಾದಲ್ಲಿ ಹೈದರಾಬಾದ್ ಮೂಲದ 48 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರಿಗೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ.

ಉಪ್ಪಾಲದ ಕೆ.ಗೋವರ್ಧನ್‌ ರೆಡ್ಡಿ ಅವರ ಮೇಲೆ ಫ್ಲೋರಿಡಾದ ಪೆಟ್ರೋಲ್‌ ಬಂಕ್‌ ಮತ್ತು ಸೂಪರ್‌ಮಾರ್ಕೆಟ್‌ ಪ್ರದೇಶದಲ್ಲಿ ಹಂತಕನೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಈ ಬಗ್ಗೆ ಗೋವರ್ಧನ್‌ ಸ್ನೇಹಿತ ರಮೇಶ್ ಪ್ರತಿಕ್ರಿಯಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

’ಮುಖಮರೆ ಮಾಡಿಕೊಂಡಿದ್ದ ಹಂತಕ ಗೋವರ್ಧನ್‌ ಮೇಲೆ ಗುಂಡು ಹಾರಿಸಿದ್ದಾನೆ. ಆ ಸಮಯದಲ್ಲಿ ಮಳಿಗೆಯಲ್ಲಿ ಗೋವರ್ಧನ್‌ ಒಬ್ಬರೇ ಇದ್ದರು. ಪ್ರಾಥಮಿಕ ಮಾಹಿತಿ ಪ್ರಕಾರ, ಹಂತಕ ಯಾವುದೇ ಹಣ ತೆಗೆದುಕೊಂಡು ಹೋಗಿಲ್ಲ. ಹತ್ಯೆಗೆ ಕಾರಣ ತಿಳಿದು ಬಂದಿಲ್ಲ’ ಎಂದು ರಮೇಶ್‌ ತಿಳಿಸಿದ್ದಾರೆ. ಅಮೆರಿಕದಲ್ಲಿ ನೆಲೆಸಿರುವ ಅವರ ಸಂಬಂಧಿಯಿಂದ ಮಾಹಿತಿ ಪಡೆದಿದ್ದಾರೆ.

ADVERTISEMENT

ಗೋವರ್ಧನ್‌ ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಸುಮಾರು ಐದು ವರ್ಷಗಳ ಹಿಂದೆ ಅಮೆರಿಕಕ್ಕೆ ತೆರಳಿದ್ದ ಅವರು ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.