ನರೇಂದ್ರ ಮೋದಿ
(ಸಂಗ್ರಹ ಚಿತ್ರ, ಕೃಪೆ: ಪ್ರಧಾನಿ ಮೋದಿ)
ನವದೆಹಲಿ: 'ಭಾರತೀಯ ನೌಕಾಪಡೆ ದಿನಾಚರಣೆ' ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.
ನೌಕಾಪಡೆಯ ಕೊಡುಗೆಯನ್ನು ಶ್ಲಾಘಿಸಿರುವ ಪ್ರಧಾನಿ ಮೋದಿ, ದೇಶದ ಸುರಕ್ಷತೆ, ಭದ್ರತೆ ಮತ್ತು ಸಮೃದ್ಧಿಯನ್ನು ಖಾತ್ರಿಗೊಳಿಸುತ್ತದೆ ಎಂದು ಹೇಳಿದ್ದಾರೆ.
'ನೌಕಾಪಡೆಯ ದಿನಾಚರಣೆಯಂದು ಅತ್ಯಂತ ಧೈರ್ಯದಿಂದ ಮತ್ತು ಸಮರ್ಪಣಾಭಾವದಿಂದ ನಮ್ಮ ಸಾಗರ ವಲಯವನ್ನು ಕಾಪಾಡುವ ಭಾರತೀಯ ನೌಕಾಪಡೆಯ ಧೀರ ಸಿಬ್ಬಂದಿಯನ್ನು ನಾವು ವಂದಿಸುತ್ತೇವೆ. ಅವರ ಬದ್ಧತೆಯು ದೇಶದ ಸುರಕ್ಷತೆ, ಭದ್ರತೆ ಮತ್ತು ಸಮೃದ್ಧಿಯನ್ನು ಖಾತ್ರಿಗೊಳಿಸುತ್ತದೆ. ದೇಶದ ಶ್ರೀಮಂತ ಕಡಲ ಇತಿಹಾಸದ ಬಗ್ಗೆಯೂ ನಾವು ಹೆಮ್ಮೆಪಟ್ಟುಕೊಳ್ಳುತ್ತೇವೆ' ಎಂದು ಬರೆದುಕೊಂಡಿದ್ದಾರೆ.
ದೇಶದ ರಕ್ಷಣಾ ವಲಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ನೌಕಾಪಡೆಯ ವಿಡಿಯೊವನ್ನು ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಗಳಲ್ಲಿ ಹಂಚಿದ್ದಾರೆ.
1971ರಲ್ಲಿ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ (ಆಪರೇಷನ್ ಟ್ರೈಡೆಂಟ್) ಭಾರತದ ಗೆಲುವಿನಲ್ಲಿ ನೌಕಾಪಡೆಯು ಅತ್ಯಂತ ಪ್ರಮುಖ ಪಾತ್ರ ವಹಿಸಿತ್ತು. ಕರಾಚಿಯ ನೌಕಾನೆಲೆಯ ಮೇಲೆ ಭಾರತೀಯ ನೌಕಾಪಡೆಯ ಕ್ಷಿಪಣಿ ವಾಹಕ ನೌಕೆಗಳು ದಾಳಿ ಮಾಡಿದ್ದವು. ಪಾಕಿಸ್ತಾನವನ್ನು ಸೋಲಿಸಿ ಭಾರತವು ವಿಜಯ ಸಾಧಿಸಿತು.
ಇದರ ನೆನಪಿಗಾಗಿ ಪ್ರತಿ ವರ್ಷ ಡಿಸೆಂಬರ್ 4ರಂದು ನೌಕಾಪಡೆ ದಿನಾಚರಣೆ ಆಚರಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.