ADVERTISEMENT

ನೌಕಾಪಡೆಯಿಂದ ಸಮುದ್ರ ರಕ್ಷಣೆ ಮಾತ್ರವಲ್ಲ, ಆರ್ಥಿಕ ಭದ್ರತೆಯ ಆಧಾರಸ್ತಂಭ: ರಾಜನಾಥ

ಪಿಟಿಐ
Published 26 ಆಗಸ್ಟ್ 2025, 12:38 IST
Last Updated 26 ಆಗಸ್ಟ್ 2025, 12:38 IST
   

ವಿಶಾಖಪಟ್ಟಣ : ಭಾರತೀಯ ನೌಕಪಡೆಯು ಕೇವಲ ಸಮುದ್ರ ಗಡಿಯನ್ನು ಕಾಯುವುದಿಲ್ಲ, ದೇಶದ ಆರ್ಥಿಕತೆಯ ಬೆನ್ನೆಲುಬು ಆದ ತೈಲ ಹಾಗೂ ನೈಸರ್ಗಿಕ ಅನಿಲದ ಆಮದು ರಪ್ತುಗಳಿಗೆ ಭದ್ರತೆಯನ್ನು ಒದಗಿಸುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಹೇಳಿದರು.  

ಪಹಲ್ಗಾಮ್‌ನಲ್ಲಿ ಭಾರತೀಯ ಪ್ರವಾಸಿಗರ ಮೇಲೆ ನಡೆದ ದಾಳಿಯನ್ನು ಉಲ್ಲೇಖಿಸಿ ಮಾತನಾಡಿದ ಅವರು ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ ‘ಆಪರೇಷನ್ ಸಿಂಧೂರ‘ ಯಶಸ್ವಿಯಾಗಿದೆ. ಈ ದಾಳಿಯ ಮೂಲಕ ಭಯೋತ್ಪಾದಕರಿಗೆ ಪರಿಣಾಮಕಾರಿ ಮತ್ತು ನಿಖರವಾದ ಪ್ರತಿಕ್ರಿಯೆಯನ್ನು ನೀಡಿದ್ದೇವೆ ಎಂದು ಹೇಳಿದರು.

ನೌಕಾಪಡೆಯ ಪೂರ್ವ ಕಮಾಂಡ್‌ನಲ್ಲಿ ರಹಸ್ಯ ಕಾರ್ಯಾಚರಣೆ ಸಾಮರ್ಥ್ಯದವಿರುವ ಐಎನ್‌ಎಸ್ ಉದಯಗಿರಿ ಮತ್ತು ಐಎನ್‌ಎಸ್ ಹಿಮಗಿರಿ ಯುದ್ಧ ನೌಕೆಗಳನ್ನು ನಿಯೋಜಿಸಲಾಗಿದೆ. ರಹಸ್ಯ ಕಾರ್ಯಾಚರಣೆ ಸಾಮರ್ಥ್ಯದವಿರುವ ಯುದ್ಧ ನೌಕೆಗಳ  ಕಾರ್ಯಾರಂಭವು ಭಾರತೀಯ ನೌಕಾಪಡೆಯ ಶಕ್ತಿ, ವ್ಯಾಪ್ತಿ ಮತ್ತು ಸ್ಥಿತಿಸ್ಥಾಪಕತ್ವವನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಭಾರತ ಎಂದಿಗೂ ವಿಸ್ತರಣಾವಾದ ನೀತಿಯನ್ನು ಅನುಸರಿಸುವುದಿಲ್ಲ. ಯಾವುದೇ ದೇಶದ ಮೇಲೆ ಮೊದಲು ದಾಳಿ ಮಾಡಿಲ್ಲ ಎಂಬುದು ಇಡೀ ಜಗತ್ತಿಗೆ ತಿಳಿದಿದೆ ಎಂದು ಹೇಳಿದರು.

ADVERTISEMENT

ಐಎನ್‌ಎಸ್ ಉದಯಗಿರಿ ಮತ್ತು ಐಎನ್‌ಎಸ್ ಹಿಮಗಿರಿಗಳು ಆತ್ಮನಿರ್ಭರ ಭಾರತ ಯೋಜನೆಯಡಿ ನಿರ್ಮಾಣವಾದ ಯುದ್ದ ನೌಕೆಗಳಾಗಿವೆ. ಭಾರತೀಯ ಭದ್ರತೆಯಲ್ಲಿ ಈ ನೌಕೆಗಳು ಮೈಲುಗಲ್ಲು ಸಾಧಿಸಲಿವೆ ಎಂಬ ಆತ್ಮವಿಶ್ವಾಸವಿದೆ ಎಂದು ಸಿಂಗ್‌ ಹೇಳಿದರು. 

ನೌಕಾಪಡೆಯು ಕರಾವಳಿ ತೀರಗಳನ್ನು ಕಾಯುವುದಷ್ಟೇ ಅಲ್ಲದೇ, ಹಿಂದೂ ಮಹಾಸಾಗರದಲ್ಲಿ ಶಾಂತಿ ಮತ್ತು ರಕ್ಷಣೆಯನ್ನು ಒದಗಿಸುತ್ತದೆ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.