ADVERTISEMENT

ಅಂಡಮಾನ್‌: ‘ಸಿಟ್‌ಮೆಕ್ಸ್‌–20‘ನಲ್ಲಿ ಭಾರತೀಯ ನೌಕಾಪಡೆ

ಪಿಟಿಐ
Published 22 ನವೆಂಬರ್ 2020, 9:39 IST
Last Updated 22 ನವೆಂಬರ್ 2020, 9:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅಂಡಮಾನ್ ದ್ವೀಪ ಸಾಗರದಲ್ಲಿ ನಡೆಯುತ್ತಿರುವ ‘ತ್ರಿಪಕ್ಷೀಯ ಕಡಲ ಅಭ್ಯಾಸ ಸಿಟ್‌ಮೆಕ್ಸ್‌–20‘ರಲ್ಲಿ ಸಿಂಗಪುರ ಮತ್ತು ಥಾಯ್ಲೆಂಡ್ ಜತೆಗೆ ಭಾರತೀಯ ನೌಕಾಪಡೆಯೂ ಭಾಗವಹಿಸುತ್ತಿದೆ ಎಂದು ಹಿರಿಯ ರಕ್ಷಣಾ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

ಇಂದು (ಭಾನುವಾರ) ಮತ್ತು ಸೋಮವಾರ ನಡೆಯಲಿರುವ 2ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಸ್ಥಳೀಯವಾಗಿ ನಿರ್ಮಿಸಲಾದ ಜಲಾಂತರ್ಗಾಮಿ ವಿರೋಧಿ ಯುದ್ಧ ನೌಕೆಗಳು ಸೇರಿದಂತೆ ಭಾರತೀಯ ನೌಕಾಪಡೆಯ ಹಡಗುಗಳು ಭಾಗವಹಿಸುತ್ತಿವೆ. ಎರಡು ದಿನಗಳ ಈ ಕಸರತ್ತಿನಲ್ಲಿ ಮೂರು ದೇಶಗಳ ನೌಕಾಪಡೆಗಳು ಭಾಗವಹಿಸಲಿವೆ ಎಂದು ಅವರು ಹೇಳಿದ್ದಾರೆ.

ಭಾರತೀಯ ನೌಕಾಪಡೆ, ರಿಪಬ್ಲಿಕ್ ಆಫ್ ಸಿಂಗಪುರ್ ನೇವಿ (ಆರ್‌ಎಸ್‌ಎನ್) ಮತ್ತು ರಾಯಲ್ ಥಾಯ್ ನೇವಿ (ಆರ್‌ಟಿಎನ್) ನಡುವೆ ಪರಸ್ಪರ ಕಾರ್ಯಸಾಧ್ಯತೆಯನ್ನು ಹೆಚ್ಚಿಸಲು ಸಿಟ್‌ಮೆಕ್ಸ್‌ ಸರಣಿಯ ಅಭ್ಯಾಸಗಳನ್ನು ನಡೆಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.