ADVERTISEMENT

2030ರೊಳಗೆ 800 ವಂದೇ ಭಾರತ್ ರೈಲುಗಳ ಸಂಚಾರ: ಭಾರತೀಯ ರೈಲ್ವೆ

ಪಿಟಿಐ
Published 17 ಜನವರಿ 2026, 16:18 IST
Last Updated 17 ಜನವರಿ 2026, 16:18 IST
.
.   

ನವದೆಹಲಿ: ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳನ್ನು ಓಡಿಸುವಂತೆ ಪ್ರಯಾಣಿಕರಿಂದ ಬೇಡಿಕೆ ಹೆಚ್ಚಿದ್ದು, ಇದಕ್ಕೆ ಪೂರಕವಾಗಿ ತನ್ನ ಸಂಪರ್ಕಜಾಲವನ್ನು ವಿಸ್ತರಿಸಲು ಭಾರತೀಯ ರೈಲ್ವೆ ಯೋಜಿಸುತ್ತಿದೆ.

2030ರೊಳಗೆ 800 ರೈಲುಗಳು ಹಾಗೂ 2047ರೊಳಗೆ 4,500 ವಂದೇ ಭಾರತ್ ರೈಲುಗಳ ಸಂಚಾರ ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೂಲಸೌಕರ್ಯ ಯೋಜನೆಯ ಆಧುನೀಕರಣದ ಭಾಗವಾಗಿ ರೈಲ್ವೆಯು ತನ್ನ ಸೆಮಿ ಹೈ ರೈಲಿನ ಉತ್ಪಾದನೆಯನ್ನು ಹೆಚ್ಚಿಸಲು ಮುಂದಾಗಿದೆ. 

ADVERTISEMENT

ನವದೆಹಲಿ–ಕಾನ್ಪುರ–ಪ್ರಯಾಗರಾಜ್‌–ವಾರಾಣಸಿ ಮಾರ್ಗದಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಮೊದಲ ಸಂಚಾರ 2019ರ ಫೆ.15ರಂದು ಆರಂಭಗೊಂಡಿತ್ತು.

ಪ್ರಸ್ತುತ 80ಕ್ಕೂ ಹೆಚ್ಚು ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲುಗಳು ದೇಶದ 280 ಜಿಲ್ಲೆಗಳ ಪ್ರಮುಖ ನಗರಗಳ ನಡುವೆ ಸಂಚರಿಸುತ್ತಿವೆ.

ಮೇಕ್‌ ಇನ್‌ ಇಂಡಿಯಾ ಯೋಜನೆಯಡಿ ನಿರ್ಮಿಸಲಾದ ಪ್ರತಿ ರೈಲು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸಂಚಾರ ನಡೆಸುತ್ತಿದ್ದು, ಗರಿಷ್ಠ 160 ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿವೆ ಎಂದು ರೈಲ್ವೆ ತಿಳಿಸಿದೆ.