ADVERTISEMENT

ಬಾಂಗ್ಲಾದೇಶ: ಢಾಕಾದಲ್ಲಿ ಭಾರತೀಯ ವೀಸಾ ಕೇಂದ್ರ ಪುನಾರಂಭ

ಪಿಟಿಐ
Published 18 ಡಿಸೆಂಬರ್ 2025, 15:50 IST
Last Updated 18 ಡಿಸೆಂಬರ್ 2025, 15:50 IST
<div class="paragraphs"><p>ವೀಸಾ (ಪ್ರಾತಿನಿಧಿಕ ಚಿತ್ರ)</p></div>

ವೀಸಾ (ಪ್ರಾತಿನಿಧಿಕ ಚಿತ್ರ)

   

ಢಾಕಾ: ಭದ್ರತಾ ಕಾರಣಗಳಿಂದಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ ಢಾಕಾದಲ್ಲಿರುವ ಭಾರತೀಯ ವೀಸಾ ಕೇಂದ್ರವು ಗುರುವಾರ ಮತ್ತೆ ತನ್ನ ಕಾರ್ಯಾಚರಣೆ ಆರಂಭಿಸಿದೆ.

ಭಾರತ ವಿರೋಧಿ ಗುಂಪಿನ ಪ್ರತಿಭಟನಕಾರರು ಬುಧವಾರ ಭಾರತೀಯ ಹೈಕಮಿಷನ್‌ನತ್ತ ಧಾವಿಸಿದ ಕಾರಣ ಎದುರಾಗಬಹುದಾದ ಭದ್ರತಾ ಸವಾಲುಗಳನ್ನು ಪರಿಗಣಿಸಿ, ಢಾಕಾದಲ್ಲಿನ ವೀಸಾ ಕೇಂದ್ರವು ತಾತ್ಕಾಲಿವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು.

ADVERTISEMENT

ಇದಕ್ಕೆ ಸಂಬಂಧಿಸಿದಂತೆ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಬಾಂಗ್ಲಾ ರಾಯಭಾರಿಗೆ ಸಮನ್ಸ್‌ ನೀಡಿತ್ತು. ಬಳಿಕ ಗುರುವಾರ ಎಂದಿನಂತೆ ವೀಸಾ ಕೇಂದ್ರದ ಕಾರ್ಯಾಚರಣೆ ಆರಂಭವಾಗಿದೆ. 

ಆದರೆ, ಖುಲ್ನಾ ಮತ್ತು ರಾಜಶಾಹಿ ಪ್ರದೇಶಗಳಲ್ಲಿರುವ ಭಾರತೀಯ ವೀಸಾ ಕೇಂದ್ರಗಳಲ್ಲಿ ಭದ್ರತಾ ಕಾರಣಗಳಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಈ ಕೇಂದ್ರಗಳಲ್ಲಿ ಗುರುವಾರದ ಸ್ಲಾಟ್‌ ಪಡೆದಿದ್ದ ಅರ್ಜಿದಾರರಿಗೆ ಬೇರೊಂದು ದಿನಾಂಕ ನಿಗದಿಪಡಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.