ADVERTISEMENT

ಮಾತುಕತೆ ಮೂಲಕ ಅಂತರರಾಷ್ಟ್ರೀಯ ವಿವಾದ ಬಗೆಹರಿಸುವಲ್ಲಿ ಭಾರತೀಯರ ನಂಬಿಕೆ: ಸ್ಪೀಕರ್

ಪಿಟಿಐ
Published 9 ಏಪ್ರಿಲ್ 2022, 7:50 IST
Last Updated 9 ಏಪ್ರಿಲ್ 2022, 7:50 IST
ಲೋಕಸಭೆ ಸ್ಪೀಕರ್ ಓಂ. ಬಿರ್ಲಾ
ಲೋಕಸಭೆ ಸ್ಪೀಕರ್ ಓಂ. ಬಿರ್ಲಾ   

ಗುವಾಹಟಿ: ಭಾರತದ ಸಾಂಸ್ಕೃತಿಕ ನೀತಿಯು ಜಗತ್ತನ್ನು ಕುಟುಂಬವೆಂದು ಪರಿಗಣಿಸುತ್ತದೆ ಮತ್ತು ಎಲ್ಲಾ ಅಂತರರಾಷ್ಟ್ರೀಯ ವಿವಾದಗಳನ್ನು ಮಾತುಕತೆಯ ಮೂಲಕವೇ ಪರಿಹರಿಸಿಕೊಳ್ಳಬೇಕು ಎಂಬುದರಲ್ಲಿ ಭಾರತೀಯರು ನಂಬಿಕೆ ಇಟ್ಟಿದ್ದಾರೆ ಎಂದು ಲೋಕಸಭೆ ಸ್ಪೀಕರ್ ಓಂ. ಬಿರ್ಲಾ ಶನಿವಾರ ಹೇಳಿದ್ದಾರೆ.

ಅಭಿವೃದ್ಧಿಗೆ ಪೂರಕವಾಗಿ ಶಾಂತಿ ಮತ್ತು ಸ್ಥಿರತೆಯನ್ನು ಖಾತರಿಪಡಿಸಿಕೊಳ್ಳಲು ಬಾಕಿ ಉಳಿದಿರುವ ಸಮಸ್ಯೆಗಳನ್ನು ಪರಿಹರಿಸಲು ಭಾರತ ನಿಯಮಿತವಾಗಿ ಇತರ ದೇಶಗಳೊಂದಿಗೆ ಮಾತುಕತೆ ನಡೆಸುತ್ತದೆ ಎಂದು ಅವರು ಹೇಳಿದರು.

ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಶನ್ (ಸಿಪಿಎ) ಅರ್ಧವಾರ್ಷಿಕ ಕಾರ್ಯಕಾರಿ ಸಮಿತಿ ಸಭೆಯ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, 'ನಮ್ಮ ಭಾರತೀಯ ಸಾಂಸ್ಕೃತಿಕ ನೀತಿಯು ಜಗತ್ತನ್ನು ಜಾಗತಿಕ ಕುಟುಂಬವಾಗಿ ನೋಡುತ್ತದೆ. ಅಭಿವೃದ್ಧಿಗೆ ಶಾಂತಿ ಮತ್ತು ಸ್ಥಿರತೆಯ ಅಗತ್ಯವಿದೆ. ಆದ್ದರಿಂದ, ಬಾಕಿ ಉಳಿದಿರುವ ಸಮಸ್ಯೆಗಳನ್ನು ಪರಿಹರಿಸಲು ಭಾರತ ನಿಯಮಿತವಾಗಿ ಇತರ ದೇಶಗಳೊಂದಿಗೆ ಮಾತುಕತೆ ನಡೆಸುತ್ತದೆ' ಎಂದು ಅವರು ಹೇಳಿದರು.

ADVERTISEMENT

ಈ ಎರಡು ದಿನಗಳ ಸಭೆಯ ಚರ್ಚೆಗಳು ಸದಸ್ಯ ರಾಷ್ಟ್ರಗಳು ತಮ್ಮ ದೇಶಗಳಲ್ಲಿ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ಬಿರ್ಲಾ ಆಶಿಸಿದರು.

53 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಭೌತಿಕ ಅಥವಾ ವರ್ಚುವಲ್ ಮೂಲಕ ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.