ADVERTISEMENT

ನ್ಯೂಮೊನಿಯಾ: ದೇಶೀಯ ಲಸಿಕೆಗೆ ಡಿಜಿಸಿಐ ಅನುಮೋದನೆ

ಪಿಟಿಐ
Published 15 ಜುಲೈ 2020, 19:41 IST
Last Updated 15 ಜುಲೈ 2020, 19:41 IST

ನವದೆಹಲಿ:ನ್ಯೂಮೊನಿಯಾ ಚಿಕಿತ್ಸೆ ಸಂಪೂರ್ಣ ದೇಶೀಯವಾಗಿಯೇ ಅಭಿವೃದ್ಧಿಪಡಿಸಿರುವ ಲಸಿಕೆಗೆ ಭಾರತೀಯ ಔಷಧ ನಿಯಂತ್ರಣ ಸಂಸ್ಥೆ (ಡಿಜಿಸಿಐ) ಅನುಮೋದನೆ‌ ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಹೇಳಿದೆ.

ವಿಶೇಷ ತಜ್ಞರ ಸಮಿತಿಯೊಂದಿಗೆ (ಎಸ್ಇಸಿ) ಡಿಜಿಸಿಐ ತಜ್ಞರು ಮೂರು ಹಂತಗಳಲ್ಲಿ‌ ಚಿಕಿತ್ಸಾ ಪರೀಕ್ಷೆ ನಡೆಸಿದ ಬಳಿಕ ಸಲ್ಲಿಸಿದ ದತ್ತಾಂಶ ಆಧರಿಸಿ ಅನುಮೋದನೆ‌ ನೀಡಲಾಗಿದೆ.

ಪುಣೆ ಮೂಲದ‌ ಭಾರತೀಯ ಸೆರಂ ಸಂಸ್ಥೆ ಈ‌ ಕ್ಲಿನಿಕಲ್ ಪರೀಕ್ಷೆಯ ದತ್ತಾಂಶಗಳನ್ನು ಸಲ್ಲಿಸಿತ್ತು. ನ್ಯೂಮೊಕೊಕಲ್ ಪಾಲಿಸೆಕರೈಡ್ ಕಾಂಜುಗೇಟ್ ಎಂಬ ಈ‌ ಲಸಿಕೆಗೆ ಒಪ್ಪಿಗೆ ದೊರೆತಿದ್ದು, ಮಾರುಕಟ್ಟೆ ಅನುಮೋದನೆಯೂ ಸಿಕ್ಕಿದೆ. ನವಜಾತ ಶಿಶುಗಳಲ್ಲಿ ಕಾಣಿಸಿಕೊಳ್ಳುವ ನ್ಯೂಮೋನಿಯಾದ ಚಿಕಿತ್ಸೆಗೆ ಈ ಲಸಿಕೆ ಪರಿಣಾ‌ಮಕಾರಿ ಎಂದು‌ ಸಚಿವಾಲಯ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.