ADVERTISEMENT

ಭಾರತದ 63 ಪೊಲೀಸ್‌ ಠಾಣೆಗಳಲ್ಲಿ ವಾಹನಗಳಿಲ್ಲ: ನಿತ್ಯಾನಂದ ರೈ

ಪಿಟಿಐ
Published 14 ಮಾರ್ಚ್ 2023, 15:56 IST
Last Updated 14 ಮಾರ್ಚ್ 2023, 15:56 IST
ನಿತ್ಯಾನಂದ ರೈ
ನಿತ್ಯಾನಂದ ರೈ   

ನವದೆಹಲಿ: ‘ದೇಶದ 63 ಪೊಲೀಸ್‌ ಠಾಣೆಗಳಲ್ಲಿ ಯಾವುದೇ ವಾಹನಗಳಿಲ್ಲ. 628 ಠಾಣೆಗಳು ದೂರವಾಣಿ ಸಂಪರ್ಕವನ್ನು ಹೊಂದಿಲ್ಲ ಹಾಗೂ 285 ಠಾಣೆಗಳು ವೈರ್‌ಲೆಸ್‌ ಸೆಟ್‌ ಅಥವಾ ಮೊಬೈಲ್‌ ಫೋನ್‌ಗಳನ್ನು ಹೊಂದಿಲ್ಲ’ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಮಂಗಳವಾರ ಲೋಕಸಭೆಗೆ ತಿಳಿಸಿದರು.

ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಅವರು, ‘ಪ್ರಸ್ತುತ, ದೇಶದಲ್ಲಿ 17,535 ಪೊಲೀಸ್‌ ಠಾಣೆಗಳಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT