ADVERTISEMENT

‘ಧ್ರುವಾಸ್ತ್ರ’ ಕ್ಷಿಪಣಿ ಪರೀಕ್ಷೆ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 8:08 IST
Last Updated 23 ಜುಲೈ 2020, 8:08 IST
ಒಡಿಶಾ ಕಡಲ ತೀರದಲ್ಲಿ 'ಧ್ರುವಾಸ್ತ್ರ' ಕ್ಷಿಪಣಿ ಪರೀಕ್ಷೆ
ಒಡಿಶಾ ಕಡಲ ತೀರದಲ್ಲಿ 'ಧ್ರುವಾಸ್ತ್ರ' ಕ್ಷಿಪಣಿ ಪರೀಕ್ಷೆ   

ಬಾಲಸೋರ್(ಒಡಿಶಾ):ಸ್ವದೇಶಿ ನಿರ್ಮಿತ ಟ್ಯಾಂಕ್ ನಿರೋಧಕ ಕ್ಷಿಪಣಿ ‘ಧ್ರುವಾಸ್ತ್ರ’ ಪರೀಕ್ಷೆ ಯಶಸ್ವಿಗೊಂಡಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಚಾಂಡಿಪುರದ ಸಮಗ್ರ ಪರೀಕ್ಷಾ ಕೇಂದ್ರದಲ್ಲಿ(ಐಟಿಆರ್‌) ಪರೀಕ್ಷೆ ನಡೆಸಲಾಗಿದ್ದು, ಇದೇ 15 ಮತ್ತು 16ರಂದು ಮೂರು ಬಾರಿ ಕ್ಷಿಪಣಿ ಪ್ರಯೋಗ ನಡೆಸಲಾಯಿತು.ಇದನ್ನುರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದೆ.

‘ಧ್ರುವಾಸ್ತ್ರ’ವು ಹೆಲಿಕಾಪ್ಟರ್‌ನಿಂದ ಪ್ರಯೋಗಿಸುವ‘ನಾಗ್‌ ಹೆಲಿನಾ’ ಕ್ಷಿಪಣಿ ಸರಣಿಯ ಉನ್ನತೀಕರಿಸಿದ ಕ್ಷಿಪಣಿಯಾಗಿದ್ದು, ಶತ್ರು ಪಡೆಯ ಬಂಕರ್‌, ವಾಹನಗಳು, ಟ್ಯಾಂಕ್‌ಗಳನ್ನು ನಾಶಗೊಳಿಸುತ್ತದೆಎಂದು ಡಿಆರ್‌ಡಿಒ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.