ADVERTISEMENT

ಕೋವಿಡ್‌: ದೇಶದಾದ್ಯಂತ ಸಕ್ರಿಯ ಪ್ರಕರಣಗಳ ಇಳಿಕೆ

ಪಿಟಿಐ
Published 16 ಮೇ 2021, 12:22 IST
Last Updated 16 ಮೇ 2021, 12:22 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೇಶದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಪ್ರಮಾಣ ಇಳಿಕೆಯಾಗಿದ್ದು, ಸದ್ಯ ಒಟ್ಟು 36,18,458 ಪ್ರಕರಣಗಳಿವೆ. ಇದು ಒಟ್ಟು ಸೋಂಕು ಪ್ರಕರಣಗಳ ಶೇ 14.66ರಷ್ಟಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕರ್ನಾಟಕವು ಸೇರಿದಂತೆ 10 ರಾಜ್ಯಗಳಲ್ಲಿ ಶೇ 74.69ರಷ್ಟು ಸಕ್ರಿಯ ಪ್ರಕರಣಗಳಿವೆ. ಇತರೆ ರಾಜ್ಯಗಳೆಂದರೆ ಮಹಾರಾಷ್ಟ್ರ, ಕೇರಳ, ರಾಜಸ್ಥಾನ, ತಮಿಳುನಾಡು, ಆಂಧ್ರಪ್ರದೇಶ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್, ಛತ್ತೀಸಗಡ.

ಸಕರಾತ್ಮಕ ಪ್ರಕರಣಗಳ ಪ್ರಮಾಣವೂ ಇಳಿಕೆಯಾಗಿದೆ. ಇದು ಮೇ 3ರಂದು ಶೇ 24.47ರಷ್ಟಿದ್ದರೆ, ಮೇ 16ಕ್ಕೆ ಶೇ 16.98ಕ್ಕೆ ಕುಸಿದಿದೆ. ಕಳೆದ 24 ಗಂಟೆಗಳಲ್ಲಿ 3.62 ಲಕ್ಷ ಮಂದಿ ಗುಣಮುಖರಾಗಿದ್ದು, ಹೊಸ ಪ್ರಕರಣಗಳಿಗಿಂತ ಹೆಚ್ಚಿದೆ. ಚೇತರಿಸಿಕೊಂಡವರಲ್ಲಿ ಶೇ 70.94 ಮಂದಿ, ಗರಿಷ್ಠ ಪ್ರಕರಣಗಳಿರುವ 10 ರಾಜ್ಯಗಳಲ್ಲಿಯೇ ಇದ್ದಾರೆ.

ADVERTISEMENT

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 3,11,170 ಪ್ರಕರಣ ದೃಢಪಟ್ಟಿದ್ದು, ಇವುಗಳ ಪೈಕಿ ಶೇ 74.7ರಷ್ಟು ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ 10 ರಾಜ್ಯಗಳಲ್ಲಿವೆ.

ಕರ್ನಾಟಕದಲ್ಲಿ ಗರಿಷ್ಠ ಅಂದರೆ 41,664 ಹೊಸ ಪ್ರಕರಣಗಳು ವರದಿಯಾಗಿದ್ದು, ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ (34,848) ಮತ್ತು ತಮಿಳುನಾಡು (33,658) ಇವೆ. ದೇಶದಲ್ಲಿ ಸಾವಿನ ಪ್ರಮಾಣ ಶೇ 1.09ರಷ್ಟಿದೆ.

ಕಳೆದ 24 ಗಂಟೆಗಳಲ್ಲಿ 4,077ಮಂದಿ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ಗರಿಷ್ಠ ಅಂದರೆ 960 ಮಂದಿ ಸತ್ತಿದ್ದರೆ, ನಂತರದ ಸ್ಥಾನದಲ್ಲಿ ಕರ್ನಾಟಕ ಇದ್ದು 349 ಮಂದಿ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.