ADVERTISEMENT

ದೇಶದಲ್ಲಿ 50 ಕೋಟಿ ಡೋಸ್ ದಾಟಿದ ಲಸಿಕೆ ವಿತರಣೆ: ಪ್ರಧಾನಿ ಮೋದಿ ಶ್ಲಾಘನೆ

ಪಿಟಿಐ
Published 6 ಆಗಸ್ಟ್ 2021, 16:48 IST
Last Updated 6 ಆಗಸ್ಟ್ 2021, 16:48 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ದೇಶದಲ್ಲಿ ಕೊವಿಡ್ -19 ಲಸಿಕೆ ವಿತರಣೆಯ ಒಟ್ಟು ಸಂಖ್ಯೆ 50 ಕೋಟಿ ಡೋಸ್ ದಾಟಿದ್ದು, ಕೊರೊನಾ ವೈರಸ್ ವಿರುದ್ಧ ಭಾರತದ ಹೋರಾಟಕ್ಕೆ ಬಲವಾದ ಉತ್ತೇಜನ ಸಿಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

ಶುಕ್ರವಾರ 43.29 ಲಕ್ಷ ಡೋಸ್‌ ಸೇರಿ ದೇಶದಲ್ಲಿ ಬೃಹತ್ ಕೋವಿಡ್ ಲಸಿಕೆ ಅಭಿಯಾನದಲ್ಲಿ ವಿತರಣೆಯಾಗಿರುವ ಲಸಿಕೆಗಳ ಒಟ್ಟು ಸಂಖ್ಯೆ 50 ಕೋಟಿ ಡೋಸ್ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

‘ಕೋವಿಡ್ -19 ವಿರುದ್ಧದ ಭಾರತದ ಹೋರಾಟವು ಬಲವಾದ ಉತ್ತೇಜನವನ್ನು ಪಡೆದಿದೆ. ಲಸಿಕೆಯ ಡೋಸ್ ಸಂಖ್ಯೆಗಳು 50 ಕೋಟಿ ಗಡಿ ದಾಟಿವೆ. ನಮ್ಮ ನಾಗರಿಕರಿಗೆ #SabkoVaccineMuft(ಸರ್ವರಿಗೂ ಉಚಿತ ಲಸಿಕೆ) ಲಸಿಕಾ ಅಭಿಯಾನದಡಿ ಲಸಿಕೆ ಹಾಕುವುದನ್ನು ನಾವು ಖಚಿತಪಡಿಸುತ್ತೇವೆ’ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ADVERTISEMENT

ದೇಶದಲ್ಲಿ ಜನವರಿ 16 ರಂದು ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕುವ ಮೂಲಕ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಮುಂಚೂಣಿ ಕಾರ್ಯಕರ್ತರಿಗೆ ಫೆಬ್ರವರಿ 2 ರಿಂದ ಲಸಿಕೆ ನೀಡಲು ಆರಂಭಿಸಲಾಗಿತ್ತು.

ಮಾರ್ಚ್ 1 ರಿಂದ 60 ವರ್ಷಕ್ಕಿಂತ ಮೇಲ್ಪಟ್ಟವರು, 45 ಮತ್ತು ಅದಕ್ಕಿಂತ ಮೇಲ್ಪಟ್ಟ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಲಸಿಕೆ ನೀಡಲು ಸರ್ಕಾರ ನಿರ್ಧಾರ ಕೈಗೊಂಡಿತ್ತು.

ದೇಶವು ಏಪ್ರಿಲ್ 1 ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಲು ಆರಂಭಿಸಲಾಯ್ತು. .

ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಲು ಅವಕಾಶ ನೀಡುವ ಮೂಲಕ ಲಸಿಕೆ ಅಭಿಯಾನವನ್ನು ವಿಸ್ತರಿಸಲು ಸರ್ಕಾರ ನಿರ್ಧರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.