ADVERTISEMENT

ಸ್ವದೇಶಿ ನಿರ್ಮಿತ ವಿಮಾನವಾಹಕ 'ವಿಕ್ರಾಂತ್‌' ಯುದ್ಧನೌಕೆಯ ಪ್ರಯೋಗಾರ್ಥ ಸಂಚಾರ

ಪಿಟಿಐ
Published 24 ಅಕ್ಟೋಬರ್ 2021, 14:52 IST
Last Updated 24 ಅಕ್ಟೋಬರ್ 2021, 14:52 IST
ವಿಮಾನವಾಹಕ ಯುದ್ಧನೌಕೆ (ಐಎಸಿ) ವಿಕ್ರಾಂತ್‌ 
ವಿಮಾನವಾಹಕ ಯುದ್ಧನೌಕೆ (ಐಎಸಿ) ವಿಕ್ರಾಂತ್‌    

ನವದೆಹಲಿ: ಸ್ವದೇಶಿ ನಿರ್ಮಿತ ಮೊದಲ ವಿಮಾನವಾಹಕ ಯುದ್ಧನೌಕೆ (ಐಎಸಿ) ವಿಕ್ರಾಂತ್‌ಸಮುದ್ರದಲ್ಲಿ ತನ್ನ ಎರಡನೇ ಪ್ರಯೋಗಾರ್ಥ ಸಮುದ್ರ ಸಂಚಾರವನ್ನು ಭಾನುವಾರ ಆರಂಭಿಸಿತು.

ದೇಶದ ಅತಿದೊಡ್ಡ ಮತ್ತು ಅತ್ಯಂತ ಸಂಕೀರ್ಣದಿಂದ ಕೂಡಿರುವ ಯುದ್ಧನೌಕೆ ಇದಾಗಿದ್ದು, ಮುಂದಿನ ಆಗಸ್ಟ್‌ ವೇಳೆಗೆ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳ್ಳಲಿದೆ.

40,000 ಟನ್ ತೂಕದ ವಿಮಾನವಾಹಕ ಯುದ್ಧನೌಕೆ, ಆಗಸ್ಟ್‌ನಲ್ಲಿ ಐದು ದಿನಗಳ ಮೊದಲ ಪ್ರಯೋಗಾರ್ಥ ಸಮುದ್ರ ಸಂಚಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು. ಯುದ್ಧನೌಕೆಯ ಪ್ರಮುಖ ವ್ಯವಸ್ಥೆಗಳ ಕಾರ್ಯಕ್ಷಮತೆ ತೃಪ್ತಿಕರವಾಗಿದೆ ಎಂದೂ ನೌಕಾಪಡೆ ಹೇಳಿತ್ತು.

ADVERTISEMENT

ಈ ವಿಮಾನವಾಹಕ ಯುದ್ಧನೌಕೆ ವಿಕ್ರಾಂತ್ ಕೊಚ್ಚಿಯಿಂದ ಭಾನುವಾರ ಪ್ರಯಾಣ ಬೆಳೆಸಿದೆ ಎಂದು ನೌಕಾಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.