ADVERTISEMENT

ಕೊರೊನಾ ಲಸಿಕೆ ತಯಾರಿಕೆಯಲ್ಲಿ ಭಾರತದ ಪ್ರಮುಖ ಪಾತ್ರವಹಿಸಲಿದೆ: ಬಿಲ್‌ಗೇಟ್ಸ್

ಪಿಟಿಐ
Published 15 ಸೆಪ್ಟೆಂಬರ್ 2020, 13:56 IST
Last Updated 15 ಸೆಪ್ಟೆಂಬರ್ 2020, 13:56 IST
ಬಿಲ್‌ಗೇಟ್ಸ್‌
ಬಿಲ್‌ಗೇಟ್ಸ್‌   

ನವದೆಹಲಿ: ಕೊರೊನಾ ಲಸಿಕೆ ಸಿದ್ಧವಾದ ನಂತರ ಅದನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವಲ್ಲಿ ಭಾರತ ಪ್ರಮುಖ ಪಾತ್ರವಹಿಸಲಿದ್ದು, ಇದನ್ನು ಜಗತ್ತೇ ಎದುರು ನೋಡುತ್ತಿದೆ ಎಂದು ಮೈಕ್ರೋಸಾಫ್ಟ್ ಸಂಸ್ಥೆಯ ಸಹ ಸಂಸ್ಥಾಪಕ ಬಿಲ್‌ಗೇಟ್ಸ್‌ ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿ ಸಂಸ್ಥೆಯೊಂದರ ಜತೆ ದೂರವಾಣಿ ಮೂಲಕ ಮಾತನಾಡಿರುವ ಅವರು, ‘ಭಾರತದ ದೊಡ್ಡ ಪ್ರಮಾಣದಲ್ಲಿ ಕೊರೊನಾ ಲಸಿಕೆಯನ್ನು ತಯಾರಿಸಿ, ಜಗತ್ತಿನ ಇತರೆ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಪೂರೈಕೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಲಿದೆ’ಎಂದು ಹೇಳಿದ್ದಾರೆ.

‘ಮುಂದಿನ ವರ್ಷದ ವೇಳೆಗೆ ಲಸಿಕೆ ತಯಾರಾಗಲಿದೆ. ಆದಷ್ಟು ಬೇಗ ಭಾರತ ಈ ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲಿ ಎಂದು ನಾವೆಲ್ಲ ಬಯಸುತ್ತಿದ್ದೇವೆ. ಒಮ್ಮೆ ಲಸಿಕೆ ತಯಾರಾಗಿ, ಪರಿಣಾಮಕಾರಿ ಮತ್ತು ಸುರಕ್ಷತೆಯಿಂದ ಕೂಡಿದೆ ಎಂದು ಗೊತ್ತಾದರೆ, ಭಾರತದಿಂದಲೇ ಈ ಲಸಿಕೆಯನ್ನು ಖರೀದಿಸಬಹುದು’ಎಂದು ಬಿಲ್‌ಗೇಟ್ಸ್‌ ಹೇಳಿದ್ದಾರೆ.

ADVERTISEMENT

‘ಇದು ವಿಶ್ವದ ಮಹಾಯುದ್ಧದಂತಲ್ಲ. ಅದಕ್ಕಿಂತ ದೊಡ್ಡದು. ನಾವು ಹಿಂದೆಂದೂ ನೋಡದಂತಹ ಸಮಯ ಎದುರಾಗುತ್ತದೆ’ಎಂದು ಕೊರೊನೋತ್ತರದ ದಿನಗಳ ಕುರಿತು ಬಿಲ್‌ಗೇಟ್ಸ್‌ ಭವಿಷ್ಯ ನುಡಿದಿದ್ದಾರೆ.

ವಿಶ್ವದ ಅತಿದೊಡ್ಡ ಚಾರಿಟಬಲ್‌ ಟ್ರಸ್ಟ್‌ಗಳಲ್ಲಿ ಒಂದಾದ ಬಿಲ್‌ಮತ್ತು ಮಿಲಿಂಡಾ ಪ್ರತಿಷ್ಠಾನ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿದೆ. ಭಾರತದಲ್ಲಿ ಕೋವಿಡ್ -19 ಲಸಿಕೆಗಳ ತಯಾರಿಕೆ ಮತ್ತು ವಿತರಣೆಯನ್ನು ವೇಗಗೊಳಿಸಲು ಪ್ರತಿಷ್ಠಾನವು ಸೀರಮ್ ಸಂಸ್ಥೆಯೊಂದಿಗೆ ಸಹಭಾಗಿತ್ವವನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.