ADVERTISEMENT

ರಾಷ್ಟ್ರೀಯ ಹಿತಾಸಕ್ತಿ ಮುಖ್ಯವಾದಾಗ ದೊಡ್ಡ ನಿರ್ಧಾರ ಸಾಧ್ಯ: ನರೇಂದ್ರ ಮೋದಿ

ಪಿಟಿಐ
Published 6 ಮೇ 2025, 16:27 IST
Last Updated 6 ಮೇ 2025, 16:27 IST
   

ನವದೆಹಲಿ: ರಾಷ್ಟ್ರೀಯ ಹಿತಾಸಕ್ತಿಗೆ ಪ್ರಾಧಾನ್ಯ ಹಾಗೂ ದೇಶದ ಸಾಮರ್ಥ್ಯದ ಮೇಲೆ ದೃಢವಾದ ನಂಬಿಕೆ ಇದ್ದಾಗ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲು, ಗುರಿ ಸಾಧನೆ ಸಾಧ್ಯವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪ್ರತಿಪಾದಿಸಿದ್ದಾರೆ.

ಎಬಿಪಿ ನೆಟ್‌ವರ್ಕ್‌ ಹಮ್ಮಿಕೊಂಡಿದ್ದ ‘ಇಂಡಿಯಾ@2047’ ಶೃಂಗಸಭೆಯಲ್ಲಿ ಮಾತನಾಡಿದ ಅವರು, ‘ದೇಶದಲ್ಲಿನ ಪ್ರಸಕ್ತ ವಿದ್ಯಮಾನಗಳನ್ನು ಗಮನಿಸುವ ಜನರು, ಪ್ರಜಾಪ್ರಭುತ್ವದಿಂದ ಇಷ್ಟೆಲ್ಲಾ ಸಾಧ್ಯವಾಗುತ್ತಿದೆ ಎಂದು ಹೆಮ್ಮೆಯಿಂದ ಹೇಳಬಹುದು’ ಎಂದರು.

‘ನಮ್ಮ ಸರ್ಕಾರ ಜಿಡಿಪಿ ಕೇಂದ್ರಿತ ವಿಧಾನದ ಬದಲು ‘ಜನರ ಒಟ್ಟು ಸಬಲೀಕರಣ’(ಜಿಇಪಿ) ಆಧಾರಿತ ಪ್ರಗತಿಯತ್ತ ಹೆಜ್ಜೆ ಹಾಕುತ್ತಿದೆ’ ಎಂದು ಹೇಳಿದರು.

ADVERTISEMENT

ಸಿಂಧೂ ನದಿ ಒಪ್ಪಂದಕ್ಕೆ ತಡೆ ನೀಡಿರುವುದನ್ನು ಪ್ರಸ್ತಾಪಿಸುವ ಮೂಲಕ ಅವರು ದೊಡ್ಡ ನಿರ್ಧಾರ ತೆಗೆದುಕೊಂಡಿರುವುದನ್ನು ಉದಾಹರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.