ADVERTISEMENT

ಹಕ್ಕಿ ಡಿಕ್ಕಿ: ಕೋಲ್ಕತ್ತಕ್ಕೆ ಹೊರಟಿದ್ದ ಇಂಡಿಗೊ ವಿಮಾನ ನಾಗ್ಪುರಕ್ಕೆ ವಾಪಸ್

ಪಿಟಿಐ
Published 2 ಸೆಪ್ಟೆಂಬರ್ 2025, 10:37 IST
Last Updated 2 ಸೆಪ್ಟೆಂಬರ್ 2025, 10:37 IST
<div class="paragraphs"><p>&nbsp;ಇಂಡಿಗೊ ವಿಮಾನ</p></div>

 ಇಂಡಿಗೊ ವಿಮಾನ

   

ನಾಗ್ಪುರ: ಹಕ್ಕಿ ಡಿಕ್ಕಿಯಾದ ಪರಿಣಾಮ ಕೋಲ್ಕತ್ತಕ್ಕೆ ಹೊರಟಿದ್ದ ಇಂಡಿಗೊ ವಿಮಾನ ನಾಗ್ಪುರ ವಿಮಾನ ನಿಲ್ದಾಣಕ್ಕೆ ವಾಪಸ್ಸಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ವಿಮಾನದಲ್ಲಿ 160–165 ಪ್ರಯಾಣಿಕರಿದ್ದರು. ಅವರ ಸುರಕ್ಷತೆಗಾಗಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ, ಜತೆಗೆ ವಿಮಾನ ಹಾರಾಟವನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ಪಿಟಿಐಗೆ ಮಾಹಿತಿ ನೀಡಿದ್ದಾರೆ.

ADVERTISEMENT

6E 812 ಇಂಡಿಗೊ ವಿಮಾನ ಮಂಗಳವಾರ ಬೆಳಿಗ್ಗೆ ಕೋಲ್ಕತ್ತಾಗೆ ಹೊರಟಿತ್ತು, ಟೇಕ್‌ ಆಪ್‌ ಆಗುತ್ತಿದ್ದಂತೆ ಹಕ್ಕಿಯೊಂದು ಡಿಕ್ಕಿ ಹೊಡೆದಿದೆ, ಮುಂಜಾಗೃತಾ ಕ್ರಮವಾಗಿ ಪೈಲಟ್‌ ವಿಮಾನವನ್ನು ನಾಗ್ಪುರಕ್ಕೆ ವಾಪಸ್‌ ತಂದಿದ್ದು, ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ. ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಇಂಡಿಗೊ ವಕ್ತಾರರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.