ಪಟ್ನಾ: ದೆಹಲಿಯಿಂದ ಹೊರಟಿದ್ದ ಇಂಡಿಗೊ ವಿಮಾನವು ಪಟ್ನಾದ ಜಯಪ್ರಕಾಶ್ ನಾರಾಯಣ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇನಲ್ಲಿ ಇಳಿದ ತಕ್ಷಣ ಮತ್ತೆ ಟೇಕ್ ಆಫ್ ಆಗಿ ಆಕಾಶದಲ್ಲಿ ಕೆಲ ಹೊತ್ತು ಸುತ್ತು ಹಾಕಿತು.
ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ವಿಮಾನದಲ್ಲಿ 173 ಪ್ರಯಾಣಿಕರು ಇದ್ದರು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದರು.
‘ಇಂಡಿಗೊ ವಿಮಾನವು ರನ್‌ವೇ ಮೇಲೆ ಇಳಿದಿತ್ತು. ಆದರೆ, ಅಗತ್ಯವಾದ ರನ್ ವೇ ಇಲ್ಲದಿರುವುದನ್ನು ಅರಿತ ಪೈಲಟ್ ಮತ್ತೆ ಟೇಕ್ ಆಫ್ ಮಾಡಿದರು. ಆಕಾಶದಲ್ಲಿ ಕೆಲ ಹೊತ್ತು ಸುತ್ತಿ ನಂತರ ಸುರಕ್ಷಿತವಾಗಿ ಕೆಳಗಿಳಿಸಿದರು’ ಎಂದು ಅವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.