ADVERTISEMENT

ಘರ್ಷಣೆ ವರದಿಯಾಗದೇ ಇದ್ದಿದ್ದರೆ ಮೋದಿ ಮಾತಲ್ಲೇ ನಿರತರಾಗಿರುತ್ತಿದ್ದರು: ಒವೈಸಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಡಿಸೆಂಬರ್ 2022, 11:13 IST
Last Updated 13 ಡಿಸೆಂಬರ್ 2022, 11:13 IST
ನರೇಂದ್ರ ಮೋದಿ ಮತ್ತು ಅಸಾದುದ್ದೀನ್‌ ಒವೈಸಿ
ನರೇಂದ್ರ ಮೋದಿ ಮತ್ತು ಅಸಾದುದ್ದೀನ್‌ ಒವೈಸಿ   

ನವದೆಹಲಿ: ಭಾರತ ಮತ್ತು ಚೀನಾ ನಡುವಿನ ಗಡಿ ಗರ್ಷಣೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಐಎಂಐಎಂ ಸಂಸದ ಅಸಾದುದ್ದೀನ್‌ ಒವೈಸಿ, ‘ರಾಜಕೀಯ ನಾಯಕತ್ವವನ್ನು ಪ್ರದರ್ಶಿಸುವಲ್ಲಿ ಪ್ರಧಾನಿ ವಿಫಲರಾಗಿದ್ದಾರೆ’ ಎಂದು ಆರೋಪಿಸಿದ್ದಾರೆ.

ದೆಹಲಿಯಲ್ಲಿ ಮಂಗಳವಾರ ಮಾತನಾಡಿರುವ ಅವರು, ‘ಡಿಸೆಂಬರ್ 9 ರಂದು ಘರ್ಷಣೆ ಸಂಭವಿಸಿದೆ. ಅವರು ಇಂದು ಹೇಳಿಕೆ ನೀಡುತ್ತಿದ್ದಾರೆ. ಮಾಧ್ಯಮಗಳು ವರದಿ ಮಾಡದೇ ಇದ್ದಿದರೆ ಅವರು ಇನ್ನೂ ಮಾತನಾಡುತ್ತಲೇ ಇರುತ್ತಿದ್ದರು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ವಾಸ್ತವ ಅರಿಯಲು ಎಲ್ಲಾ ಪಕ್ಷಗಳ ಪ್ರತಿನಿಧಿಗಳ ನಿಯೋಗವನ್ನು ಮೋದಿ ಅವರು ಘರ್ಷಣೆಯ ಸ್ಥಳಕ್ಕೆ ಕರೆದೊಯ್ಯಬೇಕು’ ಎಂದೂ ಅವರು ಆಗ್ರಹಿಸಿದರು.

ADVERTISEMENT

‘ಚೀನಾದ ಹೆಸರು ಹೇಳಲು ಪ್ರಧಾನಿ ಹೆದರುತ್ತಾರೆ. ಚೀನಾದ ಬಗ್ಗೆ ಮಾತನಾಡಲು ಅವರ ಸರ್ಕಾರ ಹೆದರುತ್ತದೆ’ ಎಂದು ಒವೈಸಿ ಟೀಕಾ ಪ್ರಹಾರ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.