ನವದೆಹಲಿ: ಸಿಂಧೂ ಜಲ ಒಪ್ಪಂದವು ಅಮಾನತಿನಲ್ಲಿ ಇರುವ ಕಾರಣ ಉಳಿತಾಯವಾಗುವ ನೀರನ್ನು ಮುಂದಿನ ಒಂದೂವರೆ ವರ್ಷದ ಒಳಗಾಗಿ ದೆಹಲಿ, ಹರಿಯಾಣ ಮತ್ತು ರಾಜಸ್ಥಾನಕ್ಕೆ ಹರಿಸಲಾಗುವುದು ಎಂದು ಕೇಂದ್ರ ಸಚಿವ ಮನೋಹರ ಲಾಲ್ ಖಟ್ಟರ್ ಅವರು ಶುಕ್ರವಾರ ಘೋಷಿಸಿದರು.
‘ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನದೊಂದಿಗಿನ ಸಿಂಧೂ ನದಿ ಜಲ ಒಪ್ಪಂದವು ಅಮಾನತಿನಲ್ಲಿದೆ. ಕೆಟ್ಟ ಸಂದರ್ಭದಲ್ಲಿಯೂ ಕೆಲವೊಮ್ಮೆ ಒಳ್ಳೆಯದಾಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.
‘ಪಾಕಿಸ್ತಾನಕ್ಕೆ ಹರಿದುಹೋಗುತ್ತಿದ್ದ ದೊಡ್ಡ ಪ್ರಮಾಣದ ನೀರು ಇನ್ಮುಂದೆ ದೆಹಲಿ, ರಾಜಸ್ಥಾನ, ಹರಿಯಾಣಕ್ಕೆ ಸರಬರಾಜಾಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.