ADVERTISEMENT

ವಿಶಾಖಪಟ್ಟಣ: ಐಎನ್‌ಎಸ್‌ 'ಏಂಡ್ರೊತ್‌' ನೌಕಾಪಡೆಗೆ ಸೇರ್ಪಡೆ

ಪಿಟಿಐ
Published 6 ಅಕ್ಟೋಬರ್ 2025, 14:31 IST
Last Updated 6 ಅಕ್ಟೋಬರ್ 2025, 14:31 IST
<div class="paragraphs"><p>ಐಎನ್‌ಎಸ್‌ ಏಂಡ್ರೊತ್‌</p></div>

ಐಎನ್‌ಎಸ್‌ ಏಂಡ್ರೊತ್‌

   

ವಿಶಾಖಪಟ್ಟಣ: ಎರಡನೇ ಜಲಾಂತರ್ಗಾಮಿ ನಿಗ್ರಹ ಯುದ್ಧನೌಕೆ ಐಎನ್‌ಎಸ್‌ ‘ಏಂಡ್ರೊತ್‌‘ ಭಾರತೀಯ ನೌಕಾಪಡೆಗೆ ಸೋಮವಾರ ಸೇರ್ಪಡೆಗೊಂಡಿತು.

ವೈಸ್‌ ಅಡ್ಮಿರಲ್ ರಾಜೇಶ್‌ ಪೆಂದಾರ್ಕರ್, ಪಶ್ಚಿಮ ನೌಕಾ ಕಮಾಂಡ್‌ನ ಫ್ಲ್ಯಾಗ್‌ ಆಫೀಸರ್ ಕಮಾಂಡಿಂಗ್‌ ಇನ್‌ ಚೀಫ್ ಮತ್ತು  ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ  ವಿ‌ಶಾಖಪಟ್ಟಣದ ನೌಕಾನೆಲೆಯಲ್ಲಿ ಐಎನ್‌ಎಸ್‌ ‘ಏಂಡ್ರೊತ್‌‘ ಸೇರ್ಪಡೆ ಕಾರ್ಯಕ್ರಮ ನಡೆಯಿತು.

ADVERTISEMENT

ಐಎನ್‌ಎಸ್‌ ‘ಏಂಡ್ರೊತ್‌‘ ದೇಶಿನಿರ್ಮಿತ ನೌಕೆಯಾಗಿದ್ದು, ಇದನ್ನು ಕೋಲ್ಕತ್ತ ಮೂಲದ ಗಾರ್ಡನ್‌ ರೀಚ್‌ ಶಿಪ್‌ ಬಿಲ್ಡರ್ಸ್ ಆ್ಯಂಡ್‌ ಎಂಜಿನಿಯರ್ಸ್ ಲಿಮಿಟೆಡ್‌ (ಜಿಆರ್‌ಎಸ್‌ಇ) ನಿರ್ಮಿಸಿದೆ. ಅದರಲ್ಲಿರುವ ಶೇ 80ರಷ್ಟು ಬಿಡಿಭಾಗಗಳು ಸ್ಥಳೀಯವಾಗಿ ತಯಾರಾಗಿದೆ.

ಅತ್ಯಾಧುನಿಕ ಜಲಾಂತರ್ಗಾಮಿ ನಿಗ್ರಹ ಯುದ್ಧ ನೌಕೆ ’ಏಂಡ್ರೊತ್‌‘ ಸುಧಾರಿತ ಶಸ್ತ್ರಾಸ್ತ್ರಗಳು, ಸೆನ್ಸರ್‌ಗಳು ಮತ್ತು ಸಂಭವನೀಯ ದಾಳಿಗಳನ್ನು ನಿಖರವಾಗಿ ಪತ್ತೆ ಮಾಡಿ ನಿಷ್ಕ್ರೀಯಗೊಳಿಸುವ ವ್ಯವಸ್ಥೆಯನ್ನು ಹೊಂದಿದೆ.

ಐಎನ್‌ಎಸ್‌ ಏಂಡ್ರೊತ್‌ ಭಾರತ ನೌಕಾ ಪಡೆಗೆ ಸೋಮವಾರ ಸೇರ್ಪಡೆಗೊಂಡಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.