ADVERTISEMENT

ಮೆಹುಲ್ ಚೋಕ್ಸಿ ವಿರುದ್ಧ ಇಂಟರ್‌ಪೋಲ್‌ ರೆಡ್‌ಕಾರ್ನರ್ ನೋಟಿಸ್

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2018, 7:26 IST
Last Updated 13 ಡಿಸೆಂಬರ್ 2018, 7:26 IST
ಮೆಹುಲ್ ಚೋಕ್ಸಿ
ಮೆಹುಲ್ ಚೋಕ್ಸಿ    

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ವಂಚಿಸಿದ ಪ್ರಕರಣದ ಆರೋಪಿ ಮೆಹುಲ್ ಚೋಕ್ಸಿ ವಿರುದ್ಧ ಇಂಟರ್‌ಪೋಲ್‌ ರೆಡ್‌ಕಾರ್ನರ್ ನೋಟಿಸ್ (ಜಾಗತಿಕ ಅರೆಸ್ಟ್ ವಾರಂಟ್) ಹೊರಡಿಸಲಾಗಿದೆ. ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಬೇಕೆಂದು ಸಿಬಿಐ ಒತ್ತಾಯಿಸಿತ್ತು.

ಹಗರಣ ಬೆಳಕಿಗೆ ಬೆಳಕಿಗೆ ಬಂದ ಬೆನ್ನಲ್ಲೇ ಚೋಕ್ಸಿ ದೇಶದಿಂದ ಪರಾರಿಯಾಗಿದ್ದರು. ಇದೀಗ ಅವರು ಆಂಟಿಗುವಾದಲ್ಲಿ ವಾಸಿಸುತ್ತಿದ್ದಾರೆ,
ವಜ್ರ ವ್ಯಾಪಾರಿ ಹಾಗೂ ಸಂಬಂಧಿಯಾಗಿದ್ದ ನೀರವ್ ಮೋದಿ ಜತೆ ಸೇರಿ ಚೋಕ್ಸಿ ಪಿಎನ್‍ಬಿಯಿಂದ ₹13 ಕೋಟಿಗಿಂತಲೂ ಹೆಚ್ಚು ವಂಚನೆ ನಡೆಸಿದ್ದರು.ಸಿಬಿಐ ಮತ್ತು ಜಾರಿ ನಿರ್ದೇಶನಾಲಯಚೋಕ್ಸಿ ವಿರುದ್ಧ ಮುಂಬೈನಲ್ಲಿ ಆರೋಪ ಪಟ್ಟಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT