ADVERTISEMENT

ಸೀಮಾ ಪ್ರಕರಣದ ತನಿಖೆ ಪ್ರಗತಿಯಲ್ಲಿ : ವಿದೇಶಾಂಗ ಇಲಾಖೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2023, 21:09 IST
Last Updated 20 ಜುಲೈ 2023, 21:09 IST
ಸೀಮಾ ಹೈದರ್
ಸೀಮಾ ಹೈದರ್    

ನವದೆಹಲಿ: ಎರಡು ತಿಂಗಳ ಹಿಂದೆ ಗಡಿ ದಾಟಿ ಭಾರತಕ್ಕೆ ಬಂದಿದ್ದ ಪಾಕಿಸ್ತಾನದ ಪ್ರಜೆ ಸೀಮಾ ಹೈದರ್‌ಗೆ ಸಂಬಂಧಿಸಿದ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ಹೇಳಿದೆ.

ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದ 30 ವರ್ಷದ ಸೀಮಾ, ತನ್ನ ನಾಲ್ಕು  ಮಕ್ಕಳ ಜೊತೆಗೆ ಗಡಿ ದಾಟಿ ನೇಪಾಳದ ಮೂಲಕ ಮೇ 13ರಂದು ಅಕ್ರಮವಾಗಿ  ಭಾರತ ಪ್ರವೇಶಿಸಿದ್ದರು. 

‘ನಮಗೆ ಈ  ಪ್ರಕರಣದ ಅರಿವಿದೆ. ಆಕೆ ಕೋರ್ಟ್ ಎದುರು ಹಾಜರಾಗಿದ್ದು, ಜಾಮೀನು ದೊರೆತಿದೆ. ಪ್ರಕರಣ ಈಗ ನ್ಯಾಯಾಲಯದಲ್ಲಿರುವ ಕಾರಣ ಹೆಚ್ಚು ಹೇಳಲು ಬಯಸುವುದಿಲ್ಲ‘ ಎಂದು ಸಚಿವಾಲಯದ ವಕ್ತಾರರಾದ ಅರಿಂದಮ್‌ ಬಾಗ್ಚಿ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.