
ಪಿಟಿಐ
ಕೋಲ್ಕತ್ತ: ರಾಜಸ್ಥಾನದ ಥಾರ್ ಮರುಭೂಮಿ ಬಳಿಯ ಕರೀಂ ಶಾಹಿಯಲ್ಲಿ ಸುಮಾರು 3000 ವರ್ಷಗಳಷ್ಟು ಹಿಂದಿನ ಕಬ್ಬಿಣ ಯುಗದ ಹಾಗೂ ವಿಗಾಕೋಟ್‌ನಲ್ಲಿ ಮಧ್ಯಕಾಲೀನ ಶಿಲಾಯುಗದ ಕುರುಹುಗಳನ್ನು ಐಐಟಿ ಖರಗ್‌ಪುರದ ಸಂಶೋಧಕರು ಪತ್ತೆ ಹಚ್ಚಿದ್ದಾರೆ.
ಕರೀಂ ಶಾಹಿ ಪ್ರದೇಶದಲ್ಲಿ ಕಂಡು ಬಂದಿರುವ ಕುರುಹುಗಳು ಆರಂಭಿಕ ಕಬ್ಬಿಣ ಯುಗದಿಂದ ಆರಂಭಿಕ ಐತಿಹಾಸಿಕ ಯುಗ (3100–2300) ಹಾಗೂ ವಿಗಾಕೋಟ್‌ನಲ್ಲಿ ಪತ್ತೆಯಾಗಿರುವ ಕುರುಹುಗಳು ಮಧ್ಯಕಾಲೀನ ಶಿಲಾಯುಗ ಕಾಲದ್ದು (1500–900) ಎಂದು ಐಐಟಿ ಖರಗ್‌ಪುರ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸಂಶೋಧನೆ ಕುರಿತು ಆನ್‌ಲೈನ್ ಜರ್ನಲ್ ಎಲ್ಸೆವಿಯರ್‌ನಲ್ಲಿ ‘ಆರ್ಕಿಯಾಲಜಿಕಲ್ ರಿಸರ್ಚ್ ಇನ್ ಏಷ್ಯಾ’ ಹೆಸರಿನ ಲೇಖನದಲ್ಲಿ ಪ್ರಕಟವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.