ADVERTISEMENT

ಇದು ಸರ್ಕಾರವೋ; ದುರಾಸೆಯ ಲೇವಾದೇವಿಗಾರನೋ: ಕೇಂದ್ರದ ವಿರುದ್ಧ ರಾಹುಲ್‌ ವಾಗ್ದಾಳಿ

'ಇಂಧನ ಮೇಲೆ ತೆರಿಗೆ ಹೊರೆ'

ಪಿಟಿಐ
Published 20 ಜುಲೈ 2021, 9:57 IST
Last Updated 20 ಜುಲೈ 2021, 9:57 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆಗೆ ಸಂಬಂಧಿಸಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ಮಂಗಳವಾರ ಮತ್ತೇ ಚಾಟಿ ಬೀಸಿದ್ದಾರೆ.

‘ಇಂಧನಗಳ ಮೇಲೆ ಅಧಿಕ ತೆರಿಗೆ ವಿಧಿಸಲಾಗುತ್ತಿದೆ. ಈ ರೀತಿ ತೆರಿಗೆ ವಿಧಿಸುತ್ತಿರುವುದನ್ನು ನೋಡಿದರೆ ಇದೇನು ಸರ್ಕಾರವೋ ಅಥವಾ ಹಳೆಯ ಹಿಂದಿ ಚಿತ್ರಗಳಲ್ಲಿ ತೋರಿಸುವ ದುರಾಸೆಯ ಲೇವಾದೇವಿಗಾರನಂತೆ ಸರ್ಕಾರ ವರ್ತಿಸುತ್ತಿದೆಯೋ ಎನಿಸುತ್ತಿದೆ’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲೆ ಕಳೆದ ಹಣಕಾಸು ವರ್ಷದಲ್ಲಿ ವಿಧಿಸಲಾದ ತೆರಿಗೆ ಪ್ರಮಾಣದಲ್ಲಿ ಶೇ 88ರಷ್ಟು ಹೆಚ್ಚಳ ಮಾಡಲಾಗಿತ್ತು ಎಂದು ಸರ್ಕಾರ ಲೋಕಸಭೆಗೆ ಸೋಮವಾರ ತಿಳಿಸಿತ್ತು. ಇದರ ಬೆನ್ನಲ್ಲೇ ರಾಹುಲ್‌ ಗಾಂಧಿಯವರು ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡಸಿದ್ದಾರೆ.

ADVERTISEMENT

ಇಂಧನಗಳ ಮೇಲಿನ ತೆರಿಗೆ ಹೆಚ್ಚಳಕ್ಕೆ ಸಂಬಂಧಿಸಿ ಮಾಧ್ಯಮವೊಂದರ ವರದಿಯನ್ನು ತಮ್ಮ ಟ್ವೀಟ್‌ನಲ್ಲಿ ಅವರು ಹಂಚಿಕೊಂಡಿದ್ದಾರೆ.

‘ಕೇಂದ್ರ ಸರ್ಕಾರ ಒಂದೆಡೆ ಸಾಲ ತೆಗೆದುಕೊಳ್ಳುವಂತೆ ಜನರನ್ನು ಪ್ರಚೋದಿಸುತ್ತದೆ. ಮತ್ತೊಂದೆಡೆ, ವಿವೇಚನಾ ರಹಿತ ತೆರಿಗೆ ಮೂಲಕ ಜನರ ಸುಲಿಗೆ ಮಾಡುತ್ತಿದೆ’ ಎಂದು ಟೀಕಿಸಿ, ಅವರು ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.