ADVERTISEMENT

ಗಾಂಧಿ ಕುಟುಂಬಕ್ಕೆ ಕಮಿಷನ್‌ ಸಿಗದಿದ್ದಕ್ಕೆ ಯುದ್ಧವಿಮಾನ ಖರೀದಿಸಲಿಲ್ಲವೇ: ಬಿಜೆಪಿ

ಪಿಟಿಐ
Published 4 ಜುಲೈ 2021, 19:31 IST
Last Updated 4 ಜುಲೈ 2021, 19:31 IST
ಸಂಬಿತ್ ಪಾತ್ರಾ
ಸಂಬಿತ್ ಪಾತ್ರಾ   

ನವದೆಹಲಿ: ‘ವಾಯುಪಡೆಯ ಸಾಮರ್ಥ್ಯ ಕುಗ್ಗಿದ್ದ ಸಮಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರವೇ ಇತ್ತು. ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ ಯುದ್ಧವಿಮಾನಗಳನ್ನು ಏಕೆ ಖರೀದಿ ಮಾಡಲಿಲ್ಲ’ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ ಭಾನುವಾರ ಪ್ರಶ್ನಿಸಿದ್ದಾರೆ.

ರಫೇಲ್‌ ಯುದ್ಧವಿಮಾನಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಕಾಂಗ್ರೆಸ್‌ನ ಆರೋಪಕ್ಕೆ ತಿರುಗೇಟು ನೀಡಿರುವ ಅವರು, ‘ಗಾಂಧಿ ಕುಟುಂಬಕ್ಕೆ ನಿರೀಕ್ಷಿಸಿದಷ್ಟು ಕಮಿಷನ್‌ ಸಿಗಲಿಲ್ಲ ಎಂಬ ಕಾರಣಕ್ಕೆ, ಕಾಂಗ್ರೆಸ್‌ ನೇತೃತ್ವದ ಆಗಿನ ಸರ್ಕಾರಯುದ್ಧ ವಿಮಾನಗಳನ್ನು ಖರೀದಿ ಮಾಡಲಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

‘ದೇಶದ ಭದ್ರತೆಯನ್ನು ಅಪಾಯಕ್ಕೆ ಸಿಲುಕಿಸಲಾಗುತ್ತಿದೆ ಎಂದು ಕಾಂಗ್ರೆಸ್‌ ಈಗ ಆರೋಪಿಸುತ್ತಿರುವುದರಲ್ಲಿ ಅರ್ಥ ಇಲ್ಲ’ ಎಂದೂ ಅವರು ವಾಗ್ದಾಳಿ ನಡೆಸಿದ್ದಾರೆ.

ADVERTISEMENT

‘ಈ ವಿಷಯವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಮುಖಂಡರು ಪ್ರಧಾನಿಯನ್ನು ಟೀಕಿಸುವುದು, ಅವರ ಮುಖಚರ್ಯೆ, ಗಡ್ಡ ಕುರಿತು ಮಾತನಾಡುವುದು ಅಚ್ಚರಿ ಮೂಡಿಸುತ್ತಿದೆ’ ಎಂದೂ ಪಾತ್ರಾ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.