ADVERTISEMENT

ಗಾಜಾದಲ್ಲಿ ಇಸ್ರೇಲ್‌ ವೈಮಾನಿಕ ದಾಳಿ: ಮೃತರ ಸಂಖ್ಯೆ 24ಕ್ಕೆ ಏರಿಕೆ

ಪಿಟಿಐ
Published 7 ಆಗಸ್ಟ್ 2022, 2:34 IST
Last Updated 7 ಆಗಸ್ಟ್ 2022, 2:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗಾಜಾ: ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಆರು ಮಕ್ಕಳು ಸೇರಿದಂತೆ 24 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಹೇಳಿದೆ.

ಮೃತರ ಪೈಕಿ ಇಬ್ಬರು ಮಹಿಳೆಯರು ಸೇರಿದ್ದಾರೆ. 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಉಗ್ರರನ್ನು ಗುರಿಯಾಗಿಸಿಕೊಂಡು ಗಾಜಾ ಮತ್ತು ಪ್ಯಾಲೇಸ್ಟಿನ್‌ ಮೇಲೆ ಇಸ್ರೇಲ್‌ ಜೆಟ್‌ಗಳು ಶುಕ್ರವಾರದಿಂದ ದಾಳಿ ನಡೆಸುತ್ತಿವೆ. ದಾಳಿಯಲ್ಲಿ ಗಾಜಾ ಕಮಾಂಡರ್‌ ತೈಸೀರ್ ಅಲ್–ಜಬಾರಿ ಮೃತಪಟ್ಟಿದ್ದಾರೆ.

ADVERTISEMENT

ಆಗಸ್ಟ್‌ 5ರಂದು ಇಸ್ರೇಲ್ ಸೇನೆ ಗಾಜಾ ಪಟ್ಟಿಗೆ ಗುಂಡು ಹಾರಿಸಿದ್ದರಿಂದ ಸಂಘರ್ಷ ಆರಂಭಗೊಂಡಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್‌ ಪ್ರದೇಶದ ಮೇಲೆ ಪ್ಯಾಲೇಸ್ಟಿನ್‌ ಬಾಂಬ್ ದಾಳಿ ನಡೆಸಿದೆ. ಬಳಿಕ ಇಸ್ರೇಲ್‌ಯುದ್ದ ವಿಮಾನಗಳು ಗಾಜಾ ನಗರದ ವಸತಿ ಪ್ರದೇಶದಲ್ಲಿ ಇಸ್ಲಾಮಿಕ್‌ ಜಿಹಾದ್‌ ಸದಸ್ಯ ನಿವಾಸದ ಮೇಲೆ ಎರಡು ಬಾಂಬ್‌ಗಳನ್ನು ಹಾಕಿದವು. ಇದಕ್ಕೂ ಮೊದಲು ಅಲ್ಲಿನ ನಿವಾಸಿಗಳಿಗೆ ದೂರವಾಣಿ ಕರೆಗಳ ಮೂಲಕ ಎಚ್ಚರಿಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.