ADVERTISEMENT

Aditya-L1: ಆದಿತ್ಯ–ಎಲ್‌1 ಉಡ್ಡಯನದ ನೇರ ಪ್ರಸಾರದ ಮಾಹಿತಿ ಇಲ್ಲಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಸೆಪ್ಟೆಂಬರ್ 2023, 8:23 IST
Last Updated 1 ಸೆಪ್ಟೆಂಬರ್ 2023, 8:23 IST
<div class="paragraphs"><p>ಆದಿತ್ಯ–ಎಲ್‌1ಉಡ್ಡಯನಕ್ಕೆ ಸಿದ್ಧತೆ</p></div>

ಆದಿತ್ಯ–ಎಲ್‌1ಉಡ್ಡಯನಕ್ಕೆ ಸಿದ್ಧತೆ

   

ಪಿಟಿಐ ಚಿತ್ರ

ಬೆಂಗಳೂರು: ಚಂದ್ರಯಾನ–3 ಯಶಸ್ಸಿನ ಬೆನ್ನಲ್ಲೇ ಸೂರ್ಯನ ಅಧ್ಯಯನಕ್ಕಾಗಿ ಭಾರತ ಕಳುಹಿಸಲಿರುವ ಚೊಚ್ಚಲ ಯೋಜನೆ ಆದಿತ್ಯ–ಎಲ್‌1 ನಾಳೆ ಬೆಳಿಗ್ಗೆ 11.50ಕ್ಕೆ ಶ್ರೀಹರಿಕೋಟಾದಿಂದ ಉಡ್ಡಯನವಾಗಲಿದೆ ಎಂದು ಇಸ್ರೊ ತಿಳಿಸಿದೆ. ಈ ಸಂಬಂಧ ಲೈವ್ ಲಿಂಕ್‌ಗಳನ್ನು ಇಸ್ರೊ ಹಂಚಿಕೊಂಡಿದೆ.

ADVERTISEMENT

ಎಲ್ಲೆಲ್ಲಿ ವೀಕ್ಷಿಸಬಹುದು:

ಟಿವಿ ಚಾನೆಲ್:

ಡಿಡಿ ನ್ಯಾಷನಲ್

ಇಸ್ರೊ ವೆಬ್‌ಸೈಟ್:

https://t.co/kL1ncOCjPY

ಇಸ್ರೊ ಫೇಸ್‌ಬುಕ್ ಪೇಜ್:

https://t.co/Q3K7buUYqg

ಇಸ್ರೊ ಯೂಟ್ಯೂಬ್ ಲಿಂಕ್:

https://t.co/YrDq896Xl1

ಆದಿತ್ಯ–ಎಲ್‌1 ಕುರಿತು ಹೆಚ್ಚಿನ ಮಾಹಿತಿ:

ಶ್ರೀಹರಿಕೋಟದ ಉಡಾವಣಾ ಕೇಂದ್ರದಿಂದ ಶನಿವಾರ ಬೆಳಿಗ್ಗೆ 11.50 ಕ್ಕೆ ಪಿಎಸ್‌ಎಲ್‌ವಿ–ಸಿ 57 ರಾಕೆಟ್‌ ಮೂಲಕ ಆದಿತ್ಯ ಎಲ್‌1 ಉಡಾವಣೆ ನಡೆಯಲಿದೆ. ಇದರಲ್ಲಿ ಸೂರ್ಯನ ಅಧ್ಯಯನ ನಡೆಸಲು ಒಟ್ಟು ಏಳು ಉಪಕರಣಗಳು (ಪೇಲೋಡ್‌) ಇರಲಿವೆ.

ಭೂಮಿಯಿಂದ 15 ಲಕ್ಷ ಕಿ.ಮೀ ದೂರದಲ್ಲಿರುವ ಲಾಂಗ್ರೇಜ್‌ ಎಲ್‌ ಒನ್‌ ಬಿಂದುವಿನಲ್ಲಿ ಆದಿತ್ಯ ಎಲ್‌–1 ಅಂತರಿಕ್ಷ ವೀಕ್ಷಣಾಲಯವನ್ನು (ಅಬ್ಸರ್ವೇಟರಿ) ಇರಿಸಲಾಗುವುದು. ಇದು ಯಾವುದೇ ಅಡಚಣೆ ಇಲ್ಲದೆ ನಿರಂತರವಾಗಿ ಸೂರ್ಯನಲ್ಲಿ ನಡೆಯುವ ಸೌರ ಚಟುವಟಿಕೆಗಳನ್ನು ಗಮನಿಸುತ್ತದೆ. ನಾಲ್ಕು ಪ್ರತ್ಯೇಕ ಉಪಕರಣಗಳಿಂದ ಸೂರ್ಯನ ಪ್ರಭಾಗೋಳ, ವರ್ಣಗೋಳ ಮತ್ತು ಕಿರೀಟದ (ಕೊರೋನಾ) ಅಧ್ಯಯನ ವನ್ನು ನಿರಂತರವಾಗಿ ನಡೆಸಲಿದೆ. ಉಳಿದ ಮೂರು ಉಪಕರಣಗಳು ಅಯಸ್ಕಾಂತ ಕ್ಷೇತ್ರ ಮತ್ತು ಕಣ ಪ್ರವಾಹದ ವೀಕ್ಷಣೆ ನಡೆಸುತ್ತವೆ. ಆದಿತ್ಯ ಎಲ್‌1 ಅನ್ನು ಸಂಪೂರ್ಣ ದೇಶೀಯವಾಗಿ ನಿರ್ಮಿಸಲಾಗಿದೆ ಎಂದು ಇಸ್ರೊ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.