
ಪಿಟಿಐ
ನವದೆಹಲಿ: ‘ಸತತ ಎರಡು ವೈಫಲ್ಯಗಳ ನಂತರ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಪಿಎಸ್‌ಎಲ್‌ವಿ ರಾಕೆಟ್ ಉಡಾವಣೆಯನ್ನು ಜೂನ್‌ನಲ್ಲಿ ಮತ್ತೊಮ್ಮೆ ನಡೆಸಲು ಪ್ರಯತ್ನಿಸಲಿದೆ’ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಇದೇ ವೇಳೆ, ಈ ವೈಫಲ್ಯಗಳ ಹಿಂದೆ ವಿಧ್ವಂಸಕ ಕೃತ್ಯ ನಡೆದಿದೆ ಎಂಬ ಶಂಕೆಯನ್ನು ಅವರು ತಳ್ಳಿಹಾಕಿದ್ದಾರೆ.
‘ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ಪಿಎಸ್‌ಎಲ್‌ವಿ– ಸಿ61 ಮತ್ತು ಈ ವರ್ಷ ಜನವರಿಯಲ್ಲಿ ನಡೆದ ಪಿಎಸ್‌ಎಲ್‌ವಿ– ಸಿ62 ಉಡಾವಣೆಯು ವಿಫಲಗೊಳ್ಳಲು ಒಂದೇ ರೀತಿಯ ಕಾರಣಗಳು ಇರಲಿಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.