ADVERTISEMENT

ಮೊದಲ ಚಿತ್ರಗಳನ್ನು ಕಳುಹಿಸಿದ ‘ಇನ್ಸಾಟ್‌–3 ಡಿಎಸ್‌’

ಪಿಟಿಐ
Published 11 ಮಾರ್ಚ್ 2024, 15:53 IST
Last Updated 11 ಮಾರ್ಚ್ 2024, 15:53 IST
.
.   

ಬೆಂಗಳೂರು: ‘ಫೆ. 17ರಂದು ಉಡ್ಡಯನಗೊಂಡಿದ್ದ ಹವಾಮಾನ ಉಪಗ್ರಹ ಇನ್ಸಾಟ್‌–3 ಡಿಎಸ್‌, ಭೂ ಚಿತ್ರಣದ ಕಾರ್ಯಾಚರಣೆಯನ್ನು ಆರಂಭಿಸಿದೆ. ಆನ್‌–ಬೋರ್ಡ್ ಪೇಲೋಡ್‌ಗಳು (6–ಚಾನೆಲ್‌ ಇಮೇಜರ್ ಮತ್ತು 19–ಚಾನೆಲ್ ಸೌಂಡರ್) ಸೆರೆಹಿಡಿದ ಮೊದಲ ಚಿತ್ರಗಳನ್ನು ಬಿಡುಗಡೆ ಮಾಡಿದೆ’ ಎಂದು ಇಸ್ರೋ ಸೋಮವಾರ ತಿಳಿಸಿದೆ.

ಇಮೇಜರ್ ಮತ್ತು ಸೌಂಡರ್ ಪೇಲೋಡ್‌ಗಳು ಇನ್ಸಾಟ್‌–3 ಡಿ ಮತ್ತು ಇನ್ಸಾಟ್‌–3 ಡಿಆರ್‌ನಲ್ಲಿರುವ ಉಪಕರಣಗಳನ್ನೇ ಹೋಲುತ್ತವೆ. ಆದರೆ ರೇಡಿಯೊಮೆಟ್ರಿಕ್ ನಿಖರತೆ, ಕಪ್ಪುಮೇಲ್ಮೈನ ಮಾಪನಾಂಕ ನಿರ್ಣಯ, ಉಷ್ಣ ನಿರ್ವಹಣೆಯಲ್ಲಿ ಗಮನಾರ್ಹ ಸುಧಾರಣೆ ಹೊಂದಿವೆ.

ಈ ಪೇಲೋಡ್‌ಗಳನ್ನು ಅಹಮದಾಬಾದ್‌ನ ಸ್ಪೇಸ್‌ ಅಪ್ಲಿಕೇಶನ್ಸ್‌ ಸೆಂಟರ್‌ನಲ್ಲಿ( ಎಸ್‌ಎಸಿ) ಅಭಿವೃದ್ಧಿಗೊಳಿಸಿ, ವಿನ್ಯಾಸಗೊಳಿಸಲಾಗಿದೆ.

ADVERTISEMENT

ಮೊದಲ ಚಿತ್ರಗಳನ್ನು ಹಾಸನದ ಕೇಂದ್ರದಲ್ಲಿ ಸಂಸ್ಕರಿಸಿ ಬಿಡುಗಡೆ ಮಾಡಲಾಗುವುದು. 6–ಚಾನೆಲ್ ಇಮೇಜರ್ ಉಪಕರಣವು ಭೂಮಿಯ ಮೇಲ್ಮೈ ಮತ್ತು ವಾತಾವರಣದ ಚಿತ್ರಗಳನ್ನು ಸೆರೆಹಿಡಿಯಲಿದೆ. ಮೋಡಗಳು, ನೀರ್ಗಾಳಿ, ಭೂ ಮೇಲ್ಮೈ ತಾಪಮಾನದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಕ್ಕೆ ಇದು ಸಹಕಾರಿಯಾಗಿದೆ ಎಂದು ತಿಳಿಸಿದೆ.

Highlights - null

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.