ADVERTISEMENT

ಮಹಾರಾಷ್ಟ್ರ | ಐ.ಟಿ.ದಾಳಿ: ₹ 400 ಕೋಟಿ ದಾಖಲೆರಹಿತ ಆದಾಯ ಪತ್ತೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2021, 10:27 IST
Last Updated 2 ಡಿಸೆಂಬರ್ 2021, 10:27 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ (ಪಿಟಿಐ): ಪುಣೆ ಮೂಲದ ಹೈನುಗಾರಿಕೆ ಮತ್ತು ಕ್ಷೀರೋತ್ಪನ್ನಗಳ ಉತ್ಪಾದನಾ ಸಂಸ್ಥೆಯ ವಿವಿಧ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಸಮರ್ಪಕ ದಾಖಲೆಗಳಿಲ್ಲದ ₹ 400 ಕೋಟಿ ಮೊತ್ತದ ಆದಾಯ ಇರುವುದನ್ನು ಪತ್ತೆ ಹಚ್ಚಿದ್ದಾರೆ.

6 ನಗರಗಳಲ್ಲಿ 24ಕ್ಕೂ ಹೆಚ್ಚು ಕಡೆ ದಾಳಿ ನಡೆಯಿತು. ಭಾರಿ ಪ್ರಮಾಣದ ನಗದು, ₹ 2.5 ಕೋಟಿ ಮೌಲ್ಯದ ಆಭರಣ ಜಪ್ತಿಯಾಗಿದೆ. ಇನ್ನೂ ಕೆಲ ಬ್ಯಾಂಕ್‌ ಲಾಕರ್‌ಗಳನ್ನು ತೆರೆಯಬೇಕಾಗಿದೆ ಎಂದು ಕೇಂದ್ರದ ನೇರ ತೆರಿಗೆ ಮಂಡಳಿಯು (ಸಿಬಿಡಿಟಿ) ಹೇಳಿಕೆಯಲ್ಲಿ ತಿಳಿಸಿದೆ.

ತೆರಿಗೆ ವಂಚನೆಗೆ ಸಂಬಂಧಿಸಿದ ಹಲವು ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಪ್ರಾಥಮಿಕ ತನಿಖೆಯ ಅನುಸಾರ ಖರೀದಿ, ಮಾರಾಟ ಮತ್ತು ಸಾಲ ಪಡೆದಂತೆನಕಲಿ ದಾಖಲೆಗಳನ್ನು ತೋರಿಸಲಾಗಿದೆ. ನಗದು ಪಾವತಿಗೆ ಸಂಬಂಧಿಸಿ ಸಮರ್ಪಕ ದಾಖಲೆಗಳಿಲ್ಲ ಎಂದು ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.