ADVERTISEMENT

ಶೇರ್ವಾನಿಯಲ್ಲಿ ಮಿಂಚಿದ ಇವಾಂಕಾ ಟ್ರಂಪ್

ಅನಿತಾ ಡೋಂಗ್ರೆ ವಿನ್ಯಾಸದ ಉಡುಗೆ

ಪಿಟಿಐ
Published 25 ಫೆಬ್ರುವರಿ 2020, 19:38 IST
Last Updated 25 ಫೆಬ್ರುವರಿ 2020, 19:38 IST
ಭಾರತೀಯ ವಸ್ತ್ರವಿನ್ಯಾಸಕಿ ಅನಿತಾ ಡ್ರೋಂಗ್ರೆ ವಿನ್ಯಾಸದ ಉಡುಗೆ ಧರಿಸಿದ್ದ ಇವಾಂಕ ಟ್ರಂಪ್ ಚಿತ್ರ: ಎಎಫ್‌ಪಿ
ಭಾರತೀಯ ವಸ್ತ್ರವಿನ್ಯಾಸಕಿ ಅನಿತಾ ಡ್ರೋಂಗ್ರೆ ವಿನ್ಯಾಸದ ಉಡುಗೆ ಧರಿಸಿದ್ದ ಇವಾಂಕ ಟ್ರಂಪ್ ಚಿತ್ರ: ಎಎಫ್‌ಪಿ   

ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಗಳು ಇವಾಂಕಾ ಟ್ರಂಪ್ ಮಂಗಳವಾರ ಭಾರತೀಯ ಉಡುಗೆ ಶೇರ್ವಾನಿ ಧರಿಸಿ ಗಮನ ಸೆಳೆದರು.

ಭಾರತದ ವಸ್ತ್ರವಿನ್ಯಾಸಕಿ ಅನಿತಾ ಡೋಂಗ್ರೆ ವಿನ್ಯಾಸ ಮಾಡಿದ್ದ ಬಿಳಿಬಣ್ಣದ ರೇಷ್ಮೆ ಶೇರ್ವಾನಿ ಧರಿಸಿದ್ದ ಇವಾಂಕಾ, ರಾಷ್ಟ್ರಪತಿ ಭವನದಲ್ಲಿ ನಡೆದ ಅಮೆರಿಕ ಅಧ್ಯಕ್ಷರ ಸ್ವಾಗತ ಸಮಾರಂಭದಲ್ಲಿ ಪಾಲ್ಗೊಂಡರು.

ಇವಾಂಕಾ ಧರಿಸಿದ್ದ ಶೇರ್ವಾನಿಯನ್ನು ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ರೇಷ್ಮೆಯಿಂದ ವಿನ್ಯಾಸ ಮಾಡಲಾಗಿದೆ.

ADVERTISEMENT

‘ಶೇರ್ವಾನಿ ಕಾಲಾತೀತ ಉಡುಗೆಯಾಗಿದ್ದು, ಈ ವಿನ್ಯಾಸವನ್ನು ಇಪ್ಪತ್ತು ವರ್ಷಗಳ ಹಿಂದೆ ಮಾಡಿದ್ದೆವು. ಆದರೂ, ಇದು ತನ್ನ ಅದ್ಭುತ ವಿನ್ಯಾಸದಿಂದ ಇಂದಿಗೂ ಸೂಕ್ತವಾಗಿದೆ. ಶೇರ್ವಾನಿ ಇಂದಿಗೂ ಅದೇ ಆಕರ್ಷಣೆ ಮತ್ತು ವರ್ಚಸ್ಸು ಉಳಿಸಿಕೊಂಡಿದೆ’ ಎಂದು ವಸ್ತ್ರವಿನ್ಯಾಸಕಿ ಅನಿತಾ ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.