ಹೈದರಾಬಾದ್: ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಪ್ರಯುಕ್ತ, ಡಿಸೆಂಬರ್ 21ರಂದು ಸರ್ಕಾರಿ ಶಾಲೆಗಳ ಎಂಟನೇ ತರಗತಿಯ4.6 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್‌ಗಳನ್ನು ವಿತರಿಸಲು ವೈಎಸ್‌ಆರ್‌ಪಿ ಸರ್ಕಾರ ನಿರ್ಧರಿಸಿದೆ.
ವಿದ್ಯಾರ್ಥಿಗಳಲ್ಲದೇ, 60 ಸಾವಿರ ಶಿಕ್ಷಕರಿಗೂ ಉಚಿತ ಟ್ಯಾಬ್‌ಗಳನ್ನು ಸರ್ಕಾರ ವಿತರಿಸಲಿದೆ.
ಪ್ರತಿ ವರ್ಷ ಎಂಟನೇ ತರಗತಿಗೆ ಪ್ರವೇಶಿಸುವ ವಿದ್ಯಾರ್ಥಿಗಳಿಗೆ ಈ ಟ್ಯಾಬ್‌ಗಳನ್ನು ವಿತರಿಸಲಿದ್ದಾರೆ. ಈ ಟ್ಯಾಬ್‌ಗಳ ಮೂಲಕ ನಂತರದ ಹಂತದ ತರಗತಿಗಳಲ್ಲಿಯೂ ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸಿ ಹತ್ತನೇ ತರಗತಿಯ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಸಹಾಯವಾಗುತ್ತದೆ ಎಂಬುದಾಗಿ ಜಗನ್ ಯೋಚಿಸಿದ್ದಾರೆ. ಈ ಟ್ಯಾಬ್‌ಗಳಿಗಾಗಿ ಸರ್ಕಾರವು ₹ 668 ಕೋಟಿ ವ್ಯಯಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.