ನ್ಯಾಯಾಲಯ
ಮುಂಬೈ: 2008ರಲ್ಲಿ ನಡೆದಿದ್ದ ಸುಲಿಗೆ ಪ್ರಕರಣದ ಆರೋಪಿಯಾಗಿರುವ ಪಾತಕಿ ಅರುಣ್ ಗವಳಿಯನ್ನು ಮುಂಬೈ ನ್ಯಾಯಾಲಯವೊಂದು ಬುಧವಾರ ಖುಲಾಸೆ ಗೊಳಿಸಿದೆ.
ಗವಳಿಯ ಕಿರಿಯ ಸಹೋದರ ವಿಜಯ್ ಅಹಿರ್ ಮತ್ತು ಆತನ ಗ್ಯಾಂಗ್‌ನ ಇತರೆ 5 ಮಂದಿಯನ್ನೂ ಖುಲಾಸೆಗೊಳಿಸಿ, ಇವರೆಲ್ಲರ ವಿರುದ್ಧದ ಆರೋಪವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ.
2005ರಲ್ಲಿ ದಾದರ್ ಪ್ರದೇಶದ ಕೊಳೆಗೇರಿ ಪುನರ್ವಸತಿ ಪ್ರಾಧಿಕಾರದ ಮರು ಅಭಿವೃದ್ಧಿ ಯೋಜನೆ ವಹಿಸಿಕೊಂಡಿದ್ದ ಬಿಲ್ಡರ್ ಒಬ್ಬರಿಗೆ ಗವಳಿ ಮತ್ತು ಗ್ಯಾಂಗ್ ಬೆದರಿಕೆ ಒಡ್ಡಿತ್ತು. ₹50 ಲಕ್ಷ ಬೇಡಿಕೆ ಇಟ್ಟಿದ್ದಲ್ಲದೇ, ಆತನಿಂದ ₹7 ಲಕ್ಷ ವಸೂಲಿ ಮಾಡಿತ್ತು ಎಂದು 2008ರಲ್ಲಿ ಬಿಲ್ಡರ್ ದೂರು ನೀಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಪೈಕಿ ಒಬ್ಬ ಆರೋಪಿ ವಿಚಾರಣೆ ಹಂತದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಆರೋಪಿ ತಪ್ಪು ಒಪ್ಪಿಕೊಂಡಿದ್ದ. ಉಳಿದ 7 ಮಂದಿಯ ವಿರುದ್ಧ ಆರೋಪದ ಸಾಬೀತಾಗದ ಕಾರಣ, ವಿಶೇಷ ನ್ಯಾಯಾಧೀಶರಾದ ಬಿ.ಡಿ. ಶೆಲ್ಕೆ ಆರೋಪಿಗಳನ್ನು ದೋಷಮುಕ್ತಗೊಳಿಸಿದ್ದಾರೆ.
ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅರುಣ್ ಗವಳಿ ನಾಗ್ಪುರದ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.