ADVERTISEMENT

ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಕುರಿತು ಭಾರತ–ಬಾಂಗ್ಲಾ ವಿದೇಶಾಂಗ ಸಚಿವರ ಚರ್ಚೆ

ಪಿಟಿಐ
Published 4 ಮಾರ್ಚ್ 2021, 11:08 IST
Last Updated 4 ಮಾರ್ಚ್ 2021, 11:08 IST
ಎಸ್.ಜೈಶಂಕರ್
ಎಸ್.ಜೈಶಂಕರ್   

ಢಾಕಾ: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್‌ ಅವರು ಗುರುವಾರ ಇಲ್ಲಿ ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ.ಅಬ್ದುಲ್‌ ಮೊಮೆನ್ ಜೊತೆಗೆ ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಕುರಿತು ಚರ್ಚಿಸಿದರು.

‘ನೆರೆ ರಾಷ್ಟ್ರಗಳು ಮೊದಲು’ ಎಂಬ ಭಾರತದ ನೀತಿಗೆ ಅನುಗುಣವಾಗಿ ದಿನದ ಭೇಟಿಗೆ ಜೈಶಂಕರ್ಇಲ್ಲಿಗೆ ಬಂದಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಚ್‌ 26ರ ಬಾಂಗ್ಲಾದೇಶ ಭೇಟಿಗೆ ಪೂರ್ವಭಾವಿಯಾಗಿ ಅಗತ್ಯ ವೇದಿಕೆ ರೂಪಿಸುವುದು ಭೇಟಿ ಉದ್ದೇಶ.

ಕುರ್ಮಿಟೊಲಾ ವಾಯುನೆಲೆಯಲ್ಲಿ ಜೈಶಂಕರ್‌ ಅವರನ್ನು ಮೊಮೆನ್ ಬರಮಾಡಿಕೊಂಡರು. ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಅವರನ್ನು ಭೇಟಿಯಾಗುವ ಸಂಭವವಿದೆ. ದ್ವಿಪಕ್ಷೀಯ ಬಾಂಧವ್ಯ ಕುರಿತು ವಿಸ್ತೃತವಾದ ಚರ್ಚೆ ನಡೆಯಿತು ಎಂದು ಭಾರತದ ರಾಯಭಾರ ಕಚೇರಿಯು ಟ್ವೀಟ್ ಮಾಡಿದೆ.

ADVERTISEMENT

ಬಾಂಗ್ಲಾದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಎಂ.ಶರಿಯಾರ್ ಅಲಾಮ್ ಅವರು, ಬಾಂಗ್ಲಾದೇಶದ ವಿಮೋಚನಾ ದಿನದ 50ನೇ ವಾರ್ಷಿಕೋತ್ಸವ ನಿಮಿತ್ತ ಮಾರ್ಚ್ 17–26ರವರೆಗೆ ವಿವಿಧ ಕಾರ್ಯಕ್ರಮ ನಡೆಯಲಿವೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.