
ನವದೆಹಲಿ: ಭಯೋತ್ಪಾದನೆ ಬಗ್ಗೆ ‘ಶೂನ್ಯ ಸಹಿಷ್ಣುತೆ’ ಪಾಲಿಸಬೇಕು ಮತ್ತು ಭಾರತದ ನೆರೆಯ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳ ಮೂಲಸೌಕರ್ಯದ ಉತ್ತೇಜನಕ್ಕೆ ಸಹಾಯ ಮಾಡಬಾರದು ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಪೋಲೆಂಡ್ ವಿದೇಶಾಂಗ ಸಚಿವ ರಾಡೋಸ್ಲಾವ್ ಸಿರ್ಕೋರ್ಸ್ಕಿಗೆ ಸೋಮವಾರ ಹೇಳಿದ್ದಾರೆ.
ಪೋಲೆಂಡ್–ಪಾಕಿಸ್ತಾನ ಅಕ್ಟೋಬರ್‌ನಲ್ಲಿ ನೀಡಿದ್ದ ಜಂಟಿ ಹೇಳಿಕೆಯಲ್ಲಿ ಕಾಶ್ಮೀರದ ಬಗ್ಗೆ ಉಲ್ಲೇಖಸಿದ್ದಕ್ಕೆ ಸಂಬಂಧಿಸಿ ಅವರು ಈ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ.
ಅಲ್ಲದೆ, ಉಕ್ರೇನ್ ಸಂಘರ್ಷದ ವಿಷಯದಲ್ಲಿ ಭಾರತವನ್ನು ಗುರಿಯಾಗಿಸುತ್ತಿರುವ ಬಗ್ಗೆಯೂ ಜೈಶಂಕರ್ ಅವರು ಪೋಲೆಂಡ್‌ನ ಉಪ ಪ್ರಧಾನಿಯೂ ಆಗಿರುವ ಸಕೋರ್ಸ್ಕಿ ಅವರೊಂದಿಗೆ ನಡೆದ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೈಶಂಕರ್ ಅವರ ಈ ಅಭಿಪ್ರಾಯವನ್ನು ಸಂಪೂರ್ಣವಾಗಿ ಒಪ್ಪುತ್ತೇನೆ ಎಂದು ಸಿಕೋರ್ಸ್ಕಿ ಹೇಳಿದ್ದಾರೆ.
ಸಿಕೋರ್ಸ್ಕಿ ಮೂರು ದಿನಗಳ ಭಾರತ ಪ್ರವಾಸದಲ್ಲಿದ್ದಾರೆ. ಐರೋಪ್ಯ ಒಕ್ಕೂಟದ ಉನ್ನತ ನಾಯಕರು ಭಾರತಕ್ಕೆ ಭೇಟಿ ನೀಡುವ 10 ದಿನಗಳ ಮೊದಲು ಅವರು ಈ ಪ್ರವಾಸ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.